ಕುಂಸಿ ಪೊಲೀಸರ ಗಾಂಜಾ ರೈಡ್

Shivamoggavoice Editor
1 Min Read

ಗಾಂಜಾ ಮಾರಾಟ ಮಾಡುವ ವೇಳೆ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅ.25 ರಂದು ಮಧ್ಯಾಹ್ನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿ ಬಸ್ ನಿಲ್ದಾಣದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕುಂಸಿ ಪೊಲೀಸರು ಖಡಕ್ ದಾಳಿ ನಡೆಸಿದ್ದಾರೆ.‌ ಓರ್ವನನ್ನ ಬಂಧಿಸಲಾಗಿದೆ.
ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಸುರೇಶ್ ಎಂ, ಪೊಲೀಸ್ ಉಪಾಧಿಕ್ಷಕರು,

ಶಿವಮೊಗ್ಗ-ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ದೀಪಕ್ ಎಂ. ಎಸ್, ಪೊಲೀಸ್ ನಿರೀಕ್ಷಕರು, ಮತ್ತು ಶಾಂತರಾಜ್ ಪೊಲೀಸ್ ಉಪ ನಿರೀಕ್ಷಕರು, ಕುಂಸಿ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಚಂದ್ರಾನಾಯಕ್, 46 ವರ್ಷ, ಬೀರನ ಕೆರೆ ಗ್ರಾಮ ಶಿವಮೊಗ್ಗ ಈತನನ್ನು ಬಂಧಿಸಲಾಗಿದೆ.

ಆರೋಪಿಯಿಂದ ಅಂದಾಜು ಮೌಲ್ಯ 15,000/- ರೂಗಳ 640 ಗ್ರಾಂ ತೂಕದ ಒಣ ಗಾಂಜಾ ಅಮಾನತ್ತು ಪಡಿಸಿಕೊಂಡು ಠಾಣಾ ಗುನ್ನೆ ಸಂಖ್ಯೆ 0213/2024 ಕಲಂ 20(b), 8(c) NDPS ಕಾಯ್ದೆ ರೀತ್ಯಾ ಪ್ರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

Share this Article