ರಾಜ್ಯದಲ್ಲಿ ಅಭ್ಕಾರಿ ಆದಾಯ ಉತ್ತಮವಾಗಿದ್ದು ಸಿ.ಎಲ್ 2 ಮತ್ತು 7 ಗಳಲ್ಲಿ ಮದ್ಯಗಳ ಬೆಲೆ ಹೆಚ್ಚಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಎಂ.ಆರ್.ಪಿ ಅಂಗಡಿಗಳಲ್ಲಿ ಮದ್ಯ ಸರಬರಾಜು ಮಾಡಿ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.ಇತ್ತೀಚಿಗೆ ದಿನಸಿ ಅಂಗಡಿ.ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಾ ಹೊರವಲಯದಲ್ಲಿ ಮದ್ಯಪಾನ ಮಾಡುವವರ ಮೇಲೆ ಪೋಲೀಸರು ಗಮನಿಸಬೇಕೆಂದು ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.ಇದೇ ವೇಳೆ ಶಿವಮೊಗ್ಗ ಅಭ್ಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.