ಸ್ವಿಚ್ ಹಾಕಲು ಮುಂದಾದ ಹೋಟೆಲ್ ಮಾಲೀಕ ಕುಸಿದು ಬಿದ್ದು ಅಸುನೀಗಿದ ಘಟನೆ ಇಂದು ಸಂಜೆ ವಿನೋಬ ನಗರದಲ್ಲಿ ನಡೆದಿದೆ. ಮೂಲದ ಪ್ರಕಾರ ವಿದ್ಯುತ್ ಶಾಕ್ ನಿಂದವಿನೋಬ ನಗರದ ರಾಜಶೇಖರ್ ಪೆಟ್ರೋಲ್ ಬಂಕ್ ಎದುರಿಗೆ ಇದ್ದ ಗುರುದರ್ಶಿನಿ ಹೋಟೆಲ್ ನ ಮಾಲೀಕರಾದ ಪ್ರಶಾಂತ್ (35)ಸಾವನ್ನಪ್ಪಿದ್ದಾರೆ. ಇಂದು ಸಂಜೆ ಸಂಭವಿಸಿದ ಅವಘಢದಲ್ಲಿ ಪ್ರಶಾಂತ್ ಅವರ ದುರ್ಮರಣ ಕುಟುಂಬಕ್ಕೆ ನುಂಗಲಾಗದ ನೋವನ್ನುಂಟು ಮಾಡಿದೆ.
ಮಾಹಿತಿ ಪ್ರಕಾರ ಇಂದು ಸಂಜೆ ಹೋಟೆಲ್ ನಲ್ಲಿದ್ದ ಪ್ರಶಾಂತ್ ಹೋಟೆಲ್ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಸ್ವಚ್ಛಗೊಳಿಸಿದ ಮಾಲೀಕರ ಮೈ ಒದ್ದೆಯಾಗಿದ್ದು, ಒದ್ದೆ ಮೈಯಲ್ಲೇ ಹೋಟೆಲ್ ನ ಲೈಟ್ ಹಾಕಲು ಮುಂದಾಗಿ ಸ್ವಿಚ್ ಬೋರ್ಡ್ ಗೆ ಕೈ ಹಾಕಿದ್ದಾರೆ.
ಸ್ವಿಚ್ ಹಾಕುವಾಗಲೆ ಮಾಲೀಕರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಆಸ್ಪತ್ರೆಯ ವೈದ್ಯರು ಪ್ರಶಾಂತ್ ಅವರ ಸಾವನ್ನ ಖಚಿತಪಡಿಸಿದ್ದಾರೆ.
ಪ್ರಶಾಂತ್ ಅವರು ಮೂಲತಃ ಕುಂದಾಪುರ ತಾಲೂಕಿನವರಾಗಿದ್ದರಿಂದ ಮೃತದೇಹವನ್ನ ಕುಟುಂಬಸ್ಥರು ಕುಂದಾಪುರಕ್ಕೆ ಕರೆದೊಯ್ಯುದಿರುವುದಾಗಿ ತಿಳಿದು ಬಂದಿದೆ. ವಿದ್ಯುತ್ ಶಾಕ್ ನಿಂದಲೇ ಪ್ರಶಾಂತ್ ಸಾವು ನೀಗಿರುವುದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಹತ್ತಿರದ ಠಾಣೆಯಲ್ಲಿ ದೂರು ದಾಖಲಾಗಬೇಕಿದೆ.