ರಾಜ್ಯದ ಕಾಂಗ್ರೆಸ್ ಸರ್ಕಾರ ಭೂ ಜಿಹಾದ್ ನಡೆಸಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ

Shivamoggavoice Editor
1 Min Read

ರಾಜ್ಯದ ಕಾಂಗ್ರೆಸ್ ಸರ್ಕಾರ ಭೂ ಜಿಹಾದ್ ನಡೆಸಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ…ನೂರಾರು ವರ್ಷಗಳ ಕಾಲ ಬದುಕಿದ ಭೂಮಿ.ಮಠ.ಜಮೀನುಗಳನ್ನು ರಾಜ್ಯ ಸರ್ಕಾರ ವಕ್ಪ್ ಹೆಸರಲ್ಲಿ ಭೂ ಜಿಹಾದ್ ನಡೆಸಲು ಹೊರಟಿದ್ದು ಎರಡು ಕೋಮುಗಳ ನಡುವೆ ಹೊಸ ವಿವಾದ ಹುಟ್ಟು ಹಾಕಿದೆ ಎಂದು ಸಂಸದ ಬಿ‌.ವೈ.ರಾಘವೇಂದ್ರ ಟೀಕಿಸಿದರು.ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದ ಲಕ್ಷಾಂತರ ಎಕರೆ ಪ್ರದೇಶವನ್ನು ವಕ್ಪ್ ಹೆಸರಿಗೆ ಖಾತೆ ವರ್ಗಾಯಿಸಲು ಕಳೆದ 6 ತಿಂಗಳಿನಿಂದಲೇ ಸರ್ಕಾರ ಮುಂದಾಗಿದೆ.ಪಹಣಿ.ಖಾತೆಗಳಲ್ಲಿ ಇದುವರೆಗೆ ಇರದ ವಕ್ಪ್ ಹೆಸರು ಹೇಗೆ ಬಂತು. ಎಂದು ಪ್ರಶ್ಣಿಸಿದ ಅವರು ವಕ್ಪ್ ಹಗರಣ ದೇಶದ ದೊಡ್ಡ ಹಗರಣದಲ್ಲಿ ಒಂದಾಗಲಿದೆ ಎಂದರು.

ಕೇಂದ್ರ ಸರ್ಕಾರವು ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲು ಜಂಟಿ ಸಂಸದೀಯ ಸಮಿತಿ ರಚಿಸಿದೆ.ಮುಂಬರುವ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ ಎಂದರು.

ರಾಜ್ಯದ ಸುಮಾರು 50 ಸಾವಿರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಅತಿವೃಷ್ಡಿ.ಅನಾವೃಷ್ಟಿ ಗೆ ಒಳಗಾದ ಬೆಳೆಗಳಿಗೆ ಸುಮಾರು 450 ಕೋಟಿ ಪರಿಹಾರದ ಹಣ ಶೀಘ್ರವಾಗಿ ಬರಲಿದೆ ಎಂದರು.

Share this Article