ಜಿಲ್ಲಾ ಬ್ರಾಹ್ಮಣ ಸಂಘ ನೀಡಿದ ದೂರಿನ ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆದಿಚುಂಚನಗಿರಿ ಶಾಲೆಯ ಸಿಇಟಿ ಪರೀಕ್ಷ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜನಿವಾರ ಕಟ್ ಮಾಡಿಸಿದ ಸಿಇಟಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ವಿರುದ್ಧ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ನಟರಾಜ್ ಭಾಗವತ್ ರಿಂದ ದೂರು ದಾಖಲಾಗಿದೆ. ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಸಮುದಾಯ ವಿದ್ಯಾರ್ಥಿಗಳಿಗೆ ಯಜ್ಞೋಪವೀತವನ್ನ ತೆಗೆಯಿಸಿ ಪರೀಕ್ಷೆ ಬರೆಯಲು ಸೂಚಿಸಿದ ಅಧಿಕಾರಿಗಳ ವಿರುದ್ಧ ಬ್ರಾಹ್ಮಣ ಸಮುದಾಯ ದೂರು ದಾಖಲಿಸಿತ್ತು.
ಇದರ ಬೆನ್ನಲ್ಲೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಅಡಿ ಸಿಇಟಿ ಪರೀಕ್ಷೆ ಕರ್ತವ್ಯ ನಿರತ ಅಧಿಕಾರಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಯಾವ ಅಧಿಕಾರಿ ವಿರುದ್ಧ ಕ್ರಮ ಜರುಗಲಿದೆ ಎಂಬ ಕುತೂಹಲ ಹಾಗೆ ಉಳಿದುಕೊಂಡಿದೆ. ಇದರ ಜೊತೆಗೆ ಜಿಲ್ಲಾಡಳಿತದ ವಿರುದ್ಧವೂ ಬ್ರಾಹ್ಮಣ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ.
ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ಉಂಟು ಮಾಡಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೂ ತಂದರೂ ಸಹ ಜಿಲ್ಲಾಡಳಿತ ನಿರ್ಲಕ್ಷ ಎತ್ತಿಹಿಡಿದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.