ಮಾಜಿ ನಗರ ಸಭೆ ಅಧ್ಯಕ್ಷ ಎನ್.ಜೆ ರಾಜಶೇಖರ್ ಇನ್ನಿಲ್ಲ

Shivamoggavoice Editor
0 Min Read

ಅನಾರೋಗ್ಯದಿಂದ ಬಳಲುತ್ತಿದ್ದ ಎನ್.ಜೆ ರಾಜಶೇಖರ್ (ಸುಭಾಶ್) (72) ವಿಧಿವಶರಾಗಿದ್ದಾರೆ. ಸುಭಾಶ್ ಅನಾರೋಗ್ಯದ ಹಿನ್ನಲೆಯಲ್ಲಿ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು.

 

ಲಿವರ್ ಕ್ಯಾನ್ಸರ್ ನಿಂದ ಬಳಲುತಿದ್ದ ಸುಭಾಶ್ ಲೋಕಸಭಾ ಚುನಾವಣೆಯ ವೇಳೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮೂರು ವಾರದ ಹಿಂದೆ ನಂಜಪ್ಪ ಆಸ್ಪತ್ರೆಗೆ ದಾಖಲಾದವರು ಇಂದು ಕೊನೆ ಉಸಿರು ಎಳೆದಿದ್ದಾರೆ.

 

ಶಿವಮೊಗ್ಗದಲ್ಲಿ ನಗರ ಸಭೆ ಇದ್ದಾಗ ಸುಭಾಶ್ ಅಧ್ಯಕ್ಷರಾಗಿದ್ದರು, ಬಿಜೆಪಿ ಪಕ್ಷದಲ್ಲಿ ಉತ್ತಮ ಸೇವೆ ಮಾಡಿಕೊಂಡು ಬಂದಿದ್ದ ಇವರು ಬಸವೇಶ್ವರ ಸಮಾಜದ ಅಧ್ಯಕ್ಷರು ಆಗಿ ಸೇವೆ ಸಲ್ಲಿಸಿದ್ದರು. ನಾಲ್ಕು ಭಾರಿ ನಗರ ಸಭೆ ಸದಸ್ಯರಾಗಿ ಒಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Share this Article