ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು, ವೀರಶೈವ ಸಮಾಜದ ಅನುಯಾಯಿ ನಾಯಕರು, ಮಾಜಿ ನಗರಸಭಾ ಅಧ್ಯಕ್ಷರು, ಆತ್ಮೀಯರು ಹಾಗೂ ಹಿತೈಷಿಗಳು ಆದ ಶ್ರೀ ಎನ್.ಜೆ. ರಾಜಶೇಖರ್ (ಸುಭಾಷ್) ಅವರು ನಿಧನರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅತ್ಯಂತ ಭಾರವಾದ ಮನಸ್ಸಿನಿಂದ ಭಾಗಿಯಾಗಲಾಯಿತು.
ವೀರಶೈವ ಸಮಾಜಕ್ಕೆ ಅವರು ನೀಡಿದ ಅಗ್ರಗಣ್ಯ ಸೇವೆಯನ್ನು ನೆನೆಯಲಾಯಿತು. ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಅವರು ನೀಡಿದ ನಿಸ್ವಾರ್ಥ ಸೇವೆಯನ್ನು ನೆನಪು ಮಾಡಿಕೊಳ್ಳಲಾಯಿತು. ಅವರೊಂದಿಗಿನ ಆತ್ಮೀಯ ಒಡನಾಟ, ಕುಟುಂಬದೊಂದಿಗಿನ ನೇರ ಸಂಪರ್ಕ, ಸೂಕ್ತ ಸಮಯದಲ್ಲಿ ನೀಡುತ್ತಿದ್ದ ಸಲಹೆ ಸಹಕಾರ ಮೆಲುಕು ಹಾಕಲಾಯಿತು. ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಅವರು ತೋರಿದ ಕಾರ್ಯವೈಖರಿಯನ್ನು ತೆರೆದಿಡಲಾಯಿತು.
ಭಗವಂತ ಅಗಲಿದ ಅತ್ಮಕ್ಕೆ ಚಿರಶಾಂತಿ ಕರುಣಿಸಲಿ, ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ🙏