ಸಾಧು ಸಂತರು ಯಾವ ಮಾರ್ಗದರ್ಶನದಲ್ಲಿ ಹೋಗಲು ಸೂಚಿಸುವರೋ ಆ ಮಾರ್ಗ ದರ್ಶನದಲ್ಲಿ ನಡೆಯಲು ಸಿದ್ದ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.
ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರಾ ಹೋಟೆಲ್ ಎದುರಿನ ರಸ್ತೆಯ ಮೇಲೆ ಹಿಂದೂ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಸಾಧು ಸಂತರ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುಸಲ್ಮನರು ಅನ್ನ ಹಾಕಿದ ಮನೆಗೆ ಕನ್ನ ಹಾಕೋರು. ಭಾರತದ ಹಿಂದುಗಳು ಈ ದೇಶದ ಮುಸ್ಮಾನರಿಗೆ ಸಿಕ್ಕಿದನ್ನು ತಗಂಡು ಸಿಕ್ಕಲ್ಲಿ ಹೊಡೆದ್ರೆ ಉಳಿತರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ನಮ್ಮ ಸುದ್ದಿಗೆ ಬಂದ್ರೆ ಏನಾಗುತ್ತೆ ಅಂತ ಬಾಬ್ರಿ ಮಸಿದಿ ಕೆಡವಿ ತೋರಿಸಿದ್ದೇವೆ. ರೀತಿ ಮುಂದುವರೆದಲ್ಲಿ ಬಾಂಗ್ಲಾನು ಇರಲ್ಲ ಪಾಕಿಸ್ತಾನು ಇರಲ್ಲ ಎಂದಿದ್ದಾರೆ. ಸಾದು ಸಂತರ ಮಾರ್ಗದರ್ಶನಲ್ಲಿ ಅಖಾಂಡ ಭಾರತ ನಿರ್ಮಾಣ ಆಗುವುದರಲ್ಲಿ ಅನಿಮಾನವಿಲ್ಲ.
ಬಸವ ಕೇಂದ್ರ ಶ್ರೀಗಳ ಮಾತು
ಬಸವಕೇಂದ್ರದ ಶ್ರೀಗಳು ಮಾತನಾಡಿ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಬಾಂಗ್ಲಾ, ಪಾಕ್ ಅಫ್ಘಾನ್ ದೇಶಗಳಲ್ಲಿ ಸೌಹರ್ಧತವಾಗಿ ಬದಕುವುದನ್ನ ಕಲಿಯಲಿಲ್ಲ. ಒಂದು ದೇಶ ಹಾಳಾಗುತ್ತೆ ಎಂದರೆ ಅದು ವಿಶ್ವವೇ ಹಾಳಾದಂತೆ. ಸಂತರ ಮೇಲೆ ಬಾಂಗ್ಲ ದೇಶ ದಬ್ಬಾಳಿಕೆ ಮಾಡಿದರೆ ಧಾರ್ಮಿಕ ಮೂಲಭೂತಕ್ಕೆ ಸಿಲುಕಿ ನಡುಗುತ್ತಿದೆ ಎಂದರು.
ಜಗತ್ತಿನಲ್ಲಿ
ಶಾಂತಿ, ಧರ್ಮ ನೆಲೆಸಬೇಕು. ವಸುದೇವ ಕುಟುಂಬಕಂ ಎಂಬುದು ಭಾರತೀಯತೆ. ಅಂದರೆ ಇಡೀ ಜಗತ್ತೇ ನಮ್ಮದು ಎಂಬುದನ್ನ ಒಳಗೊಳ್ಳುತ್ತದೆ. ಸಾಂಸ್ಕೃತಿಕತೆಗೆ ದಕ್ಕೆ ಉಂಟಾದರೆ ಅದಕ್ಕೆ ಎದ್ದೇಳಬೇಕಿದೆ. ಬಾಂಗ್ಲಾ ಒಂದೇ ಸಮಾಜ ಇರಬೇಕು ಎಂದು ಹೊರಟಿದೆ. ಆದರೆ ಭಾರತ ಹಾಗಲ್ಲ. ಭಾರತದ ವೈವಿಧ್ಯತೆ ಬೇರೆಯಾಗಿದೆ. ದೇವರ ವಿಚಾರದಲ್ಲಿ ಭಿನ್ನವಾದರು ಅವರನ್ನದ್ವೇಷಿಸದ ಹಾಗೆ ಬದುಕು ಕಟ್ಟಿಕೊಂಡವರು ನಾವು ಎಂದರು.
ಸಣ್ಣ ಸಣ್ಣ ದೇಶಗಳು ಭಾರತವನ್ನ ಸೆಡ್ಡು ಹೊಡೆಯುತ್ತವೆ ಎಂದರೆ ಅವುಗಳ ಹುಂಬತನವನ್ನ ಪ್ರಶ್ನಿಸುತ್ತದೆ. ಬಾಂಗ್ಲದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಿಲ್ಲಬೇಕು. ಆ ದೇಶ ಮಿಲ್ಟ್ರಿಯನ್ನ ಭಾರತದ ಮೇಲೆ ಅವಲಂಬಿತವಾಗಿದೆ. ಅರ್ಥ ಮಾಡಿಕೊಂಡು ನಡೆಯಬೇಕು ಎಂದರು.
ಕೂಡಲಿ ಶ್ರೀಗಳ ಮಾತು
ಕೂಡಲಿ ಪೀಠಾಧೀಶ ಅಭಿನವ ಶಂಕರರು ಮಾತನಾಡಿ, ಬಾಂಗ್ಲದಲ್ಲಿ ಅರ್ಟಿಕಲ್ 41 ಅವರರವರ ಧರ್ಮ ಆಚರಿಸಲು ಸ್ವತಂತ್ರ್ಯತೆಯನ್ನ ನೀಡುತ್ತದೆ. ಬಹುದೊಡ್ಡ ಸಮಾಜವೊಂದು ಸಂವಿಧಾನ ವಿರುದ್ಧವಾಗಿ ಮತ್ತೊಂದು ಸಮಾಜದ ಮೇಲೆ ದೌರ್ಜನ್ಯ ನಡೆಸುತ್ತದೆ. ಸರ್ಕಾರ ಸುಮ್ಮನಿದೆ ಎಂದರೆ ಸಂವಿಧಾನ ಬಾಹಿರವಾಗಿದೆ ಎಂದು ತೋರಿಸುತ್ತದೆ ಎಂದರು.
ಆ ದೇಶದಲ್ಲಿ ಎನ್ ಫೋರ್ಸ್ ಮೆಂಟ್ ಇಲ್ಲವಾಗಿದೆ. ಅದಕ್ಕೆ ಆರ್ಥಿಕ, ಜಿಯೋ ಪೊಲಿಟಕಲ್ ಕಾರಣವಿರಬಹುದಾಗಿದೆ. ನಮ್ಮದೇಶದಿಂದ ಬಾಂಗ್ಲಾಕ್ಕೆ ರಫ್ತಾಗುವ ವಸ್ತುಗಳನ್ನ ನಿಲ್ಲಿಸಬೇಕು. ವಲಸೆ ಬಂದವರನ್ನ ವಾಪಾಸ್ ಕಳುಹಿಸಬೇಕು. ಬಾಂಗ್ಲವನ್ನ ಪ್ರತ್ಯೇಕತೆಯನ್ನಾಗಿ ಮಾಡಬೇಕಿದೆ. ವ್ಯಾಪಾರಕ್ಕೆ ಹೊಡೆತ ಬಿದ್ದಾಗ ಮಾತ್ರ ಒಂದು ದೇಶ ತಗ್ಗುವುದಾದರೆ ಅದನ್ನ ಮಾಡಬೇಕು. ಇಸ್ಲಾಂನಲ್ಲಿ ವಿಶ್ವಾಸವನ್ನ ಹೊಂದಿದವರ ಬಗ್ಗೆ ಉಲ್ಲೇಖವಿದೆ. ಅವರಿಂದ ಸಹೋದತೆಯನ್ನ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಸಹೋದರರನ್ನ ಕಾಪಾಡಬೇಕಿದೆ. ಸಾಧ್ಯವಾದರೆ ಭಾರತದ ಭಾಗವಾಗಬೇಕಿದೆ ಎಂದರು.
ಮಧುಕರ್ ಮಾತು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಧುಕರ್ ಅವರು ಮಾತನಾಡಿ, ಬಾಂಗ್ಲದಲ್ಲಿ ಹಿಂದೂಗಳ ನೇಲಿನ ದೌರ್ಜನ್ಯವನ್ನ ನಿಲ್ಲುಸಬೇಕು. ಸೌಹಾರ್ಧತೆ ಕಾಪಾಡಬೇಕಿದೆ. ಇದು ಯಾರ ವಿರುದ್ಧವಲ್ಲ ಆಗ್ರಹಕ್ಕಾಗಿ ಪ್ರತಿಭಟಿಸಲಾಗುತ್ತದೆ. ಜಾತ್ಯಾತೀತತೆ ವ್ಯವಸ್ಥೆ ಇದ್ದರೂ ಲೂಟಿ, ದಂಗೆ ದೇವಸ್ಥಾನದ ವಿಗ್ರಹ ಧ್ವಂಸ, ಆ ದೇಶದ ಮಾದರಿಯ ನಾಯಕರ ವಿಗ್ರಹ ಭಂಜನೆ ಆಗಿದೆ. ಭಾರತದಿಂದ ಇಬ್ಭಾಗವಾದಾಗ ಸಹಿಸಿಕೊಳ್ಳಲಾಗಿದೆ. ನಮ್ಮವರ ಮೇಲೆಯೇ ದಾಳಿಯಾದಾಗ ಸಹಿಸಲಾಗದು. ಹಾಗಾಗಿ ಅಖಂಡ ಭಾರತದ ಕಲ್ಪನೆ ಅಗತ್ಯವಾಗಿದೆ ಎಂದರು.
ನಂತರ ಡಿಸಿ ಕಚೇರಿಗೆ ಕಾಲ್ನಡುಗೆಯಲ್ಲಿ ಸಾಗಿ ಮನವಿ ನೀಡಲಾಯಿತು. ಹಿಂದೂ ರಕ್ಷಣ ಸಮಿತಿಯಲ್ಲಿ ಎಂಎಲ್ ಸಿ ಡಾ.ಧನಂಜಯ ಸರ್ಜಿ, ದೇವರಾಜ್ ಅರಳಹಳ್ಳಿ, ರಾಜೇಶ್ ಗೌಡ ವಾರ್ಡ್ ಅಧ್ಯಕ್ಷ ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.