ಮುಖ್ಯಮಂತ್ರಿಯಾಗಿ Eಡಿಗೆ ಗೌರವ ಕೊಡುವುದನ್ನ ಸಿದ್ದರಾಮಯ್ಯ ಕಲಿಯ ಬೇಕು-ಬಿಎಸ್ ವೈ

Shivamoggavoice Editor
1 Min Read

ಯತ್ನಾಳ್ ವಿಷಯ ಎಲ್ಲಾ ಸುಸೂತ್ರವಾಗಿ ಬಗೆಹರಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮತ್ತೊಮ್ಮೆ ಉಚ್ಚರಿಸಿದ್ದಾರೆ.

 

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್ ವೈ ಎಲ್ಲರೂ ಒಟ್ಟಾಗಿ ಹೋಗುವುದರಿಂದ ಸಾಧನೆ

 

ಮಾಡಲು ಸಾಧ್ಯ ಇದೆ. ಪರಸ್ಪರ ‌ಕಚ್ಚಾಡುವುದರಿಂದ ಯಾರಿಗೂ ಲಾಭ ಇಲ್ಲ. ಎಲ್ಲರೂ ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಈ ಅಧಿವೇಶನದಲ್ಲಿ ಎಲ್ಲರೂ ಒಟ್ಟಾಗಿ ಈ ಸರಕಾರದ ವೈಫಲ್ಯದ ವಿರುದ್ದ ಹೋರಾಟ ಮಾಡಬೇಕು ಎಂದು ಹೇಳಿದರು.

ನಿನ್ನೆ ಯತ್ನಾಳ್ ಹೊರಗಿನವರಲ್ಲ ಎಂದಿದ್ದ ಬಿಎಸ್ ವೈ ಬಿಜೆಪಿಯ ಬಣ ಬಡಿದಾಟಕ್ಕೆ ಬ್ರೇಕ್ ಹಾಕಿದ್ದರು. ನಿನ್ನೆ ಯತ್ನಾಳ್ ಸಹ ಬಿಜೆಪಿ ಹೈಕಮಾಂಡ್ ಓಂ ಪಾಠಕ್ ಬಳಿ ಹೋಗಿ ಬಂದಿದ್ದರು. ಈ ಎಲ್ಲಾ ಬಳಿಕ ಏನಾಗಲಿದೆ ಕಾದುನೋಡಬೇಕಿದೆ.

 

ಕಾಂಗ್ರೆಸ್ ಸಮಾವೇಶ ವಿಚಾರ

 

ಸಮಾವೇಶ ಆ ಪಕ್ಷದ ವಿಚಾರಕ್ಕೆ ಬಿಟ್ಟಿದ್ದು, ಅವರು ಮಾಡಿಕೊಳ್ಳಲಿ ಎಂದ ಬಿಎಸ್ ವೈ ಇಡಿ ತನಿಖೆಯ ವಿರುದ್ಧ ಸಿಎಂ ಸಿದ್ದರಾಮಯ್ಯ ಮಾತನಾಡಿ ತನಿಖೆ ನಡೆಸಲು ಅವರಿಗೆ ಅಧಿಕಾರವೇ ಇಲ್ಲ ಎಂದಿದ್ದಾರೆ. ಇಡಿಗೆ ಪೂರ್ತಿ ಅಧಿಕಾರ ಇದೆ. ಇಡಿ ಏನು ತೀರ್ಮಾನ ‌ತೆಗೆದುಕೊಳ್ಳುತ್ತದೆ ಅದೇ ಅಂತಿಮ. ಅವರ ವಿರುದ್ದ ಸಾಕ್ಷ್ಯಾಧಾರಗಳು ಸಿಕ್ಕಿವೆ ಅದಕ್ಕೆ ಸಿದ್ದರಾಮಯ್ಯ ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಎಂದಿದ್ದಾರೆ.

 

ಮುಖ್ಯಮಂತ್ರಿಯಾಗಿ ಇಡಿ ಅವರಿಗೆ ಗೌರವ ಕೊಡೋದು ಕಲಿಯಬೇಕು. ಇದು ಮುಖ್ಯಮಂತ್ರಿ ಅವರಿಗೆ ಶೋಭೆ ತರಲ್ಲ. ರಾಜ್ಯಪಾಲರ ಅಧಿಕಾರ ಮೊಟಕು ವಿಚಾರದಲ್ಲೂ ಕಾಂಗ್ರೆಸ್ ಹತಾಶೆಗೊಂಡಿದೆ. ಬಹಳ ಡಿಸ್ಪೆರೇಟ್ ಆಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಇದು ಒಳ್ಳೆಯದಲ್ಲ ಎಂದು ಗುಡುಗಿದರು.

Share this Article