ಅಪಘಾತ ನಡೆಸಿ ಪರಾರಿಯಾದ ಬೈಕ್ ಚಾಲಕನ ಪತ್ತೆಗೆ ಪೊಲೀಸರ ಮನವಿ!

Shivamoggavoice Editor
1 Min Read

ಡಿ. 31: ಶಿವಮೊಗ್ಗ ನಗರದಲ್ಲಿ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ, ಮತ್ತೊಂದು ಬೈಕ್ ಚಾಲಕನ ಪತ್ತೆಗೆ ಸಹಕರಿಸಲು ಪಶ್ಚಿಮ ಟ್ರಾಫಿಕ್ ಠಾಣೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

 

ಈ ಸಂಬಂಧ ಟ್ರಾಫಿಕ್ ಪೊಲೀಸರು ಡಿ. 31 ರಂದು ಪರಾರಿಯಾದ ಬೈಕ್ ಚಾಲಕನ, ಸಿ ಸಿ ಕ್ಯಾಮರಾದಲ್ಲಿ ಸಂಗ್ರಹವಾದ ವೀಡಿಯೋದ ಫೋಟೊ ಬಿಡುಗಡೆ ಮಾಡಿದ್ದಾರೆ. ಪತ್ತೆಗೆ ಸಹಕರಿಸಲು ನಾಗರೀಕರಿಗೆ ಕೋರಿದ್ದಾರೆ.

 

ಘಟನೆ ಹಿನ್ನೆಲೆ : ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಕಳೆದ ಡಿಸೆಂಬರ್ 12 ರಂದು ಸದರಿ ಅಪಘಾತ ಸಂಭವಿಸಿತ್ತು.ಅಪರಿಚಿತ ಬೈಕ್ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಆಗಮಿಸಿ, ಕೆಎ-14 ಇಎ 2425 ಹೀರೋ ಹೊಂಡ ಕಂಪೆನಿಯ ಪ್ಯಾಷನ್ ಪ್ರೋ ಬೈಕ್ ಸವಾರರಾದ ಎನ್ ಮಂಜುನಾಥ್ ಅವರಿಗೆ ಡಿಕ್ಕಿ ಹೊಡೆಸಿದ್ದ. ನಂತರ ಬೈಕ್ ನಿಲ್ಲಿಸದೆ ಪರಾರಿಯಾಗಿದ್ದ.

 

ಆರೋಪಿತ ಬೈಕ್ ಸವಾರನ ಮೋಟಾರ್ ಬೈಕ್ ನಂಬರ್ ಕಾಣಿಸಿರಲಿಲ್ಲ. ಆದರೆ ಆರೋಪಿಯು ಬೈಕ್ ನಲ್ಲಿ ಹೋಗುತ್ತಿರುವ ಭಾವಚಿತ್ರ ದೊರಕಿತ್ತು.

 

ಸದರಿ ಭಾವಚಿತ್ರದಲ್ಲಿರುವ ವ್ಯಕ್ತಿಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ, ಪಶ್ಚಿಮ ಸಂಚಾರ ಪೊಲೀಸ್ ಠಾಣೆ ದೂ. ಸಂ. 08182 261417 ಅಥವಾ ಮೊ.ನಂ 9480803346 ಗೆ ಮಾಹಿತಿ ನೀಡುವಂತೆ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article