. 21: ವೈನ್ ಶಾಪ್ ಎದುರು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾದ ಘಟನೆ, ಶಿವಮೊಗ್ಗ ನಗರದ ಸಾಗರ ರಸ್ತೆಯ ಇಂಡಸ್ಟ್ರಿಯಲ್ ಏರಿಯಾ ಸಮೀಪದ ಬ್ಲೂಮೂನ್ ವೈನ್ಸ್ ಬಳಿ ಫೆ. 21 ರ ಸಂಜೆ ನಡೆದಿದೆ.
ಹೊಸಮನೆ ಬಡಾವಣೆ ನಿವಾಸಿಗಳಾದ ಹರೀಶ್ (35) ಹಾಗೂ ಮಂಜುನಾಥ್ (28) ಹಲ್ಲೆಗೊಳಗಾದವರೆಂದು ಗುರುತಿಸಲಾಗಿದೆ. ಮಂಜುನಾಥ್ ನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಹಾಗೂ ಹರೀಶ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹರೀಶ್ ಹಾಗೂ ಮಂಜುನಾಥ್ ರವರು ವೈನ್ ಶಾಪ್ ಗೆ ಆಗಮಿಸಿದ್ದರು. ವೈನ್ ಶಾಪ್ ನಿಂದ ಹೊರಬಂದ ವೇಳೆ, ಆಟೋದಲ್ಲಿ ಆಗಮಿಸಿದ್ದ ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ.ಈ ವೇಳೆ ರಾಡ್ ನಿಂದ ಹರೀಶ್ ಹಾಗೂ ಮಂಜುನಾಥ್ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ವಿವರ ಇನ್ನಷ್ಟೆ ತಿಳಿದುಬರಬೇಕಾಗಿದೆ.