ಉಗ್ರರ ದಾಳಿಗೆ ಲಿಯಾದ ಮಂಜುನಾಥ ಅವರ ಪಾರ್ಥೀವ ಶರೀರ ನಾಳೆ ಶಿವಮೊಗ್ಗಕ್ಕೆ ಬೆಳಗ್ಗೆ 9 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.
ಮೃತ ಮಂಜುನಾಥ್ ಅವರ ಮನೆಯ ಮುಂದೆಯೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಾರ್ಥೀವ ಶರೀರದ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಶಿವಮೊಗ್ಗ ನಗರದ ಜನತೆ ದರ್ಶನ ಪಡೆಯುವ ನಿರೀಕ್ಷೆಯಿದೆ.ನಾಳೆ ಸ್ವಯಂ ಪ್ರೇರಿತವಾಗಿ ವರತ್ಕರು ಅರ್ಧದಿನ ಅಂಗಡಿ ಮುಂಗಟ್ಟು ಬಂದ್ ಮಾಡಲಿದ್ದಾರೆ ಎಂದರು.
ವರಚತಕರು, ಹೋಟೆಲ್ ಮಾಲೀಕರು ಚಿನ್ನಬೆಳ್ಳಿ ವರ್ತರಕರು ಸಹ ಮಾಹಿತಿ ನೀಡಿದ್ದು ನಾಳೆ ಇವರೆಲ್ಲ ಸೇರಿ ಮಂಜುನಾಥ ಅವರಿಗೆ ಗೌರವ ಸಮರ್ಪಣೆ, ಮತ್ತು ಉಗ್ರರ ವಿರುದ್ಧದ ಸಂದೇಶವಾಗಿ ನಾಳೆ ಅರ್ಧದಿನ ಬಂದ್ ನಡೆಯಲಿದೆ ಎಂದರು.
ಮನೆಯ ಮುಂದೆ ಮಂಜುನಾಥ್ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಲಿದ್ದು ಸುಮಾರು ಮಧ್ಯಾಹ್ಮ 12-30 ಕ್ಕೆ ಧಾರ್ಮಿಕ ವಿಧಿವಿಧಾನ ನಡೆದು ಪಾರ್ಥೀವ ಶರೀರದ ಪಾದಯಾತ್ರೆ ಆರಂಭವಾಗಲಿದೆ. ಐಬಿ ವೃತ್ತ ಕುವೆಂಪು ರಸ್ತೆ, ಜೈಲ್ ವೃತ್ತ, ಗೋಪಿ ವೃತ್ತ, ನೆಹರೂ ರಸ್ತೆ, ಶಿವಪ್ಪ ನಾಯಕ ವೃತ್ತ ಮೂಲಕ ಬಿಹೆಚ್ ರಸ್ತೆ, ಹೊಳೆ ಬಸ್ ಸ್ಟಾಪ್ ಮೂಲಕ ರೋಟರಿ ಚಿತಾಗಾರ ತಲುಪಲಿದೆ ಎಂದರು.
ಸೂರ್ಯಭಟ್ಟರ ಮಗ ಗುಂಡಾಭಟ್ ಧಾರ್ಮಿಕ ವಿಧಿವಿಧಾನ ನಡೆಸಿಕೊಡಲಿದ್ದಾರೆ. ನಾರಾಯಣ ಬಲಿಯೂ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಪಾದಯಾತ್ರೆ ನಡೆಯಲಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಈ ಪಾದಯಾತ್ರೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಿಂದ ರಸ್ತೆ ಮೂಲಕ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ಬರಲಿದೆ. ಶಿವಮೊಗ್ಗ ತಲುಪುತ್ತಿದ್ದಂತೆ ವಿಹೆಚ್ ಪಿ ಯಿಂದ ಬೆಕ್ಕಿನಕಲ್ಮಠದಲ್ಲಿ ಸ್ವಾಗತ ಕೋರುವ ಸಾಧ್ಯತೆಯಿದೆ ಎಂದರು.
ಬೆಳಗ್ಗಿನ ಜಾವ 3 ಗಂಟೆಗೆ ಬೆಂಗಳೂರಿನಿಮದ ಪಾರ್ಥೀವ ಶರೀರ ಹೊರಡಲಿದ್ದು, ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗಕ್ಕೆ ಪಾರ್ಥೀವ ಶರೀರ ಆಗಮಿಸುವ ನಿರೀಕ್ಷೆಯಿದೆ. ಪಾರ್ಥೀವ ಶರೀರದ ಜೊತೆ ಮೃತ ಮಂಜುನಾಥ ಅವರ ಪತ್ನಿ ಪಲ್ಲವಿಯವರ ಸಂಧಿ ವಿನೂತ ಮತ್ತು ಪ್ರದೀಪ್ ಬೆಂಗಳೂರಿಗೆ ತಲುಪಲಿದ್ದು ನಾಳೆ ಪಾರ್ಥೀವ ಶರೀರದ ಜೊತೆ ಆಗಮಿಸಲಿದ್ದಾರೆ ಎಂದರು