ಶನೈಶ್ಚರ ಜಯಂತಿ ಅಂಗವಾಗಿ ಜೂ.೦೬ಕ್ಕೆ ಮಹಾ ರಥೋತ್ಸವ

ShivamoggaVoice Admin
4 Min Read

ಶಿವಮೊಗ್ಗ : ಶ್ರೀ ಶನೈಶ್ವರ ಜಯಂತಿ ಅಂಗವಾಗಿ ಜೂ.೦೬ರ ಗುರುವಾರದಂದು ಮಹಾ ರಥೊ ತ್ಸವ ಹಮಿಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ತಿಳಿಸಲಾಗಿದೆ.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿ ರೂಪುಗೊ ಳ್ಳುತ್ತಿರುವ ಶಿವಮೊಗ್ಗ ವಿನೋಬ ನಗರದ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನ, ಪ್ರತಿ ಶನಿವಾರ ಶಿವಮೊಗ್ಗ ನಗರದ ಹಾಗೂ ಸುತ್ತಮುತ್ತಲಿನ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ದೇವಾಲಯ ಸಮಿತಿ ಟ್ರಸ್ಟ್ ಇವರ ಆಶ್ರಯದಲ್ಲಿ ಕಳೆದ ೧೬ ವರ್ಷಗಳಿಂದ ಭಕ್ತರ ಶ್ರೇಯಸ್ಸಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ವರ್ಷದ ಎಲ್ಲಾ ದಿನಗಳಲ್ಲೂ ವಿಶೇಷ ಅಭಿಷೇಕ, ಪೂಜೆ, ಅರ್ಚನೆ, ದೀಪೋತ್ಸವ, ಯಾಗ ಯಜ್ಞ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು -ಮಂಗಳ ಸಮುದಾಯ ಭವನದ ಆವರಣದಲ್ಲಿ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ಹಾಗೂ ಶ್ರೀ ಶನೈಶ್ಚರ ಸ್ವಾಮಿ ದೇವಾಲಯವನ್ನು ನಿರ್ಮಿಸಿ ಲೋಕಕಲ್ಯಾಣಾರ್ಥವಾಗಿ ಸಹಸ್ರ ಮೋದಕ ಹೋಮ ಸಹಸ್ರ ನಾರಿಕೇಳ ಗಣಯಾಗ, ನವಚಂಡಿ ಕಯಾಗ, ಶತ ಚಂಡಿಕಾಯಾಗ, ಸಹಸ್ರ ಚಂಡಿಕಾಯಾಗ, ಶ್ರೀನಿವಾಸ ಕಲ್ಯಾಣೋತ್ಸವ,ಪ್ರತಿ ವರ್ಷ ಬೇರೆ ‘ಬೇರೆ ವೇದಗಳ ಸಂಹಿತಾ ಯಾಗ, ನವರಾತ್ರಿಯ ಸಂದರ್ಭದಲ್ಲಿ ೧೫ ದಿನಗಳ ಪರ್ಯಂತ ನಿತ್ಯ ಚಂಡಿಕಾ ಹೋಮ ಮತ್ತು ನಿತ್ಯ ಸಂಜೆ ನಾಡಿನ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ನಾಡಿನ ಶ್ರೇಷ್ಠ ವಿದ್ವಾಂಸರಿಗೆ ವೇದ ನಾರಾಯಣ ಅನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ, ಅಧಿಕ ಮಾಸದ ಒಂದು ತಿಂಗಳ ನಿರಂತರ ಧಾರ್ಮಿಕ ಆಧ್ಯಾತ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಅನೇಕ ಸಾಧಕರಿಗೆ ಸನ್ಮಾನ ಮಾತ್ರವಲ್ಲದೆ ಸನಾತನ ಧರ್ಮದ ಎಲ್ಲಾ ಹಬ್ಬ ಹರಿದಿನಗಳನ್ನು ವಿಶೇಷವಾಗಿ ಆಚರಿಸಲಾಗುವುದು ಎಂದರು.

ಪ್ರತಿ ಶನಿವಾರ ಅನ್ನಸಂತ ರ್ಪಣೆ ಸಹ ಪ್ರಾರಂಭವಾಗಿ ನಡೆಯುತ್ತಿದೆ.ನಾಡಿನ ಪ್ರಸಿದ್ಧ ಕಲಾವಿದರು, ವಿದ್ವಾಂಸರು ಮತ್ತು ವಿವಿಧ ಮಠಗಳ ಪೂಜ್ಯ ಸ್ವಾಮೀಜಿಯವರು ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದಿರುತ್ತಾರೆ. ನಂಬಿ ಬರುವ ಭಕ್ತರ ಅಭಯನೀಡುವ ಶ್ರೀ ಶನೈಶ್ಚರ ಸ್ವಾಮಿಯ ದರ್ಶನ ಮಾತ್ರದಿಂದಲೇ ನಮ್ಮ ಕಷ್ಟಗಳು ನೋವುಗಳು ದೂರುರವಾಗುತ್ತಿದ್ದು ಇಂದು ಅನೇಕ ಭಾಗಗಳಿಂದ ಭಕ್ತರ ದಂಡು ದಂಡಾಗಿ ಬಂದು ಶ್ರೀ ದೇವರ ಸನ್ನಿಧಿಯಲ್ಲಿ ಧನ್ಯರಾಗುತ್ತಿದ್ದಾರೆ. ಎಂದರು.

ಶ್ರೀ ಕ್ಷೇತ್ರ ಬೆಲಗೂರಿನ ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಅವಧೂತ ಸದ್ಗುರು ಪರಮಪೂಜ್ಯ ಶ್ರೀ ಶ್ರೀ ಬಿಂದು ಮಾಧವ ಶರ್ಮ ಮಹಾಸ್ವಾಮಿ ಗಳವರ ಹೇಳಿಕೆ ಹಾಗು ಕೃಪಾಶೀರ್ವಾದದೊಂದಿಗೆ ಪ್ರತೀ ವರ್ಷ ವೈಶಾಖ ಬಹುಳ ಅಮಾವಾಸ್ಯೆಯಂದು ಶ್ರೀ ಶನೈಶ್ಚರ ಜಯಂತಿ ಹಾಗೂ ಮಹಾ ರಥೋ ತ್ಸವ ಕಾರ್ಯಕ್ರಮವನ್ನು ನಡೆಸಿ ಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವು ಸಹ ಶ್ರೀ ಕ್ರೋಧಿನಾಮ ಸಂವತ್ಸರ ವೈಶಾಖ ಬಹುಳ ಅಮಾವಾಸ್ಯೆ ಜೂನ್ ೦೬ ರಂದು ಗುರುವಾರ ಶ್ರೀ ಶನೈಶ್ಚರ ಜಯಂತಿ ಹಾಗೂ ಮಹಾ ರಥೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಶ್ರೀ ಕ್ರೋಧಿನಾಮ ಸಂವತ್ಸರ ವೈಶಾಖ ಬಹುಳ ತ್ರಯೋದಶಿ ಯಂದು ದಿನಾಂಕ ೦೪.೦೬.೨೪ ಮಂಗಳವಾರ ಶ್ರೀ ವರಸಿದ್ದಿ ವಿನಾಯಕ ಸ್ವಾಮಿಯ ೧೫ನೇ ವರ್ಷದ ವಾರ್ಷಿಕೋತ್ಸವ ಇದರ ಅಂಗವಾಗಿ ಬೆಳಿಗ್ಗೆ ೮ ಗಂಟೆಯಿಂದ ಕಲಾ ಹೋಮ ೧೧.೩೦ಕ್ಕೆ ಪೂರ್ಣಾಹುತಿ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ ಎಂದರು.

ಶ್ರೀಮದ್ವಿಜಯಾಭ್ಯುದಯ ನೃಪ ಶಾಲಿವಾಹನ ಶಕ ಶ್ರೀಕ್ರೋಧಿ ನಾಮ ಸಂವತ್ಸರದ ವೈಶಾಖ ಬಹುಳ ಚತುರ್ದಶಿ ೦೫.೦೬.೨೪ ಬುಧವಾರ ಬೆಳಿಗ್ಗೆ ಕುಲ ದೇವತಾ ಪ್ರಾರ್ಥನೆ, ಸ್ವಸ್ತಿವಾಚನ, ಗುರು ಗಣಪತಿ ಪೂಜೆ, ಪುಣ್ಯಾಹ ವಾಚನ, ಋತ್ವಿಗ್ರರ್ಣನೆ, ಧ್ವಜಾರೋಹಣ, ಅಧಿವಾಸ ಹೋಮ, ಗಣ ಹೋಮ. ರಾತ್ರಿ ಭೇರಿತಾಡನ, ವಾಸ್ತು ರಾಕ್ಷೆಘ್ನ ಹೋಮ, ಬಲಿ ಇತ್ಯಾದಿ ನಡೆಯ ಲಿದೆ, ಸಂಜೆ ೬ ರಿಂದ ದೇವಾಲ ಯದ ಮುಂಭಾಗದ ಆವರಣದಲ್ಲಿ “ಆರ್ಟ್ ಆಫ್ ಲಿವಿಂಗ್” ಸಂಸ್ಥೆಯ ಅತ್ಯಂತ ಸುಪ್ರಸಿದ್ದ ಗಾಯಕರು ಪರಮ ಪೂಜ್ಯ“ಶ್ರೀ ಶ್ರೀ ರವಿಶಂಕರ ಗುರುದೇವರ” ಶಿಷ್ಯರು ಆದ “ಶ್ರೀ ಶ್ರೀನಿವಾಸ್ ಶ್ರೀಮತಿ ಶಾಲಿನಿ ಶ್ರೀನಿವಾಸ್” ತಂಡದವರು ಬೆಂಗಳೂರು ಆಶ್ರಮ ಆಗಮಿಸಿ “ದಿವ್ಯ ಸತ್ಸಂಗ” ಕಾರ್ಯಕ್ರಮ (ಗಾನ ಧ್ಯಾನ ಜ್ಞಾನ ) ನಡೆಸಿಕೊಡಲಿದ್ದಾರೆ. ಎಂದರು.

ವೈಶಾಖ ಬಹುಳ ಅಮಾವಾಸ್ಯೆ ದಿನಾಂಕ ೦೬.೦೬.೨೪ ಗುರುವಾರ ಶ್ರೀ ಶನೈಶ್ಚರ ಜಯಂತಿ ಅಂಗವಾಗಿ ಶ್ರೀ ಗಣೇಶ ಪೂಜೆ, ಪುಣ್ಯಾಹ ಅಧಿವಾಸ ಹವನ, ಗ್ರಹ ಯಾಗ, ಶನಿ ಶಾಂತಿ ನಂತರ ಬೆಳಗ್ಗೆ ೧೦.೩೦ ಕ್ಕೆ ಸಲ್ಲುವ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ ಮಹಾ ರಥೋತ್ಸವ ನಡೆಯಲಿದೆ, ನಂತರ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ ಭೂತಬಲಿ ಶಯನೋತ್ಸವ ನಡೆಯಲಿದೆ ಎಂದರು.

ಜೈಪ್ಪ ಶುದ್ಧ ಪಾಡ್ಯ ದಿನಾಂಕ ೦೭.೦೬.೨೪ ಶುಕ್ರವಾರ ಪ್ರಭೋ ದೋತ್ಸವ, ೧೦೮ ಕಲಶಸ್ಥಾಪನೆ, ಅಷ್ಟೋತ್ತರ ಪರಿಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ, ಅಧಿವಾಸ ಹೋಮ ಪೂರ್ಣಾಹುತಿ, ಮಹಾಪೂಜೆ, ಪ್ರಾರ್ಥನೆ, ಫಲ ಮಂತ್ರಾಕ್ಷತೆ ನಂತರ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದರು.

ಸಕಲ ಜನರ ಕ್ಷೇಮಾರ್ಥವಾಗಿ ನಡೆಯುವ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ ತನು ಮನ ಭವ ಸಹಾಯ ನೀಡಿ ಶ್ರೇಯೋಭಾಗಿಗಳಾಗಬೇಕಾಗಿ ಮನವಿ ಮಾಡಿದರು.

ಸಂದರ್ಭದಲ್ಲಿ ಗೋವಿಂದಪ್ಪ, ವಿ.ರಾಜು, ಸ.ನ.ಮೂರ್ತಿ, ಎಂ.ಪ್ರಭಾಕರ್, ಎಸ್.ಎಂ. ವೆಂಕಟೇಶ್, ಹೆಚ್.ಚಂದ್ರಶೇಖರ್, ಶಬರೀಶ್ ಕಣ್ಣನ್, ಕೆ.ಇ.ಕಾಂತೇಶ್, ಉಪಸ್ಥಿತರಿದ್ದರು.

Share This Article