ಜ್ವಲಂತ ಸಮಸ್ಯೆಗಳ ಪರಿಹಾರ ಪ್ರಾಮಾಣಿಕ ಪ್ರಯತ್ನ : ಬಿ.ವೈ.ರಾಘವೇಂದ್ರ

Editor Shivamogga Voice
2 Min Read

 

ಶಿವಮೊಗ್ಗ : ೧೮ ನೇ ಲೋಕಸಭೆಗೆ ನಡೆದ ಮಹಾಚುನಾವಣೆಯಲ್ಲಿ ಜನರು ಮತಚಲಾಯಿಸಿ ೨೪೦ ಕ್ಷೇತ್ರಗಳಲ್ಲಿ ಬಿಜೆಪಿಯನ್ನೂ ೨೯೨ ಸ್ಥಾನ ಎನ್‌ಡಿಎಯನ್ನ ಗೆಲುವು ಸಾಧಿಸಿದೆ. ಮತದಾರರು ಮತ್ತು ಕಾರ್ಯಕರ್ತರಿಗೆ ನೂತನ ಸಂಸದ ರಾಘವೇಂದ್ರ ಕೃತಜ್ಞತೆ ಸಲ್ಲಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ರಾಜ್ಯದಲ್ಲಿ ೨೦ ಸ್ಥಾನ ಬರುತ್ತೇ ಎಂದಿದ್ದರು. ಆದರೆ ಜನ ಎನ್‌ಡಿಎ ಗೆ ಬೆಂಬಲಿಸಿದ್ದಾರೆ. ಕಾಂಗ್ರೆಸ್‌ಗೆ ಮತ್ತೊಮ್ಮೆ ನಿರಾಕರಿಸಿದ್ದಾರೆಂದು ಎಂದರು.

ದೂರದೃಷ್ಠಿಯಿಟ್ಟುಕೊಂಡು ಪ್ರಧಾನಿ ಮೋದಿಗೆ ಹೆಚ್ಚಿನ ಮತ ಕೊಟ್ಟಿದ್ದಾರೆ. ಈ ಗೆಲುವನ್ನ ಕಾರ್ಯಕರ್ತರಿಗೆ ಅರ್ಪಿಸುವೆ. ಬೂತ್ ಮಟ್ಟದ ವರೆಗೆ ಸರ್ಕಾರದ ಯೋಜನೆಯನ್ನ ಮತದಾರರಿಗೆ ಮುಟ್ಟಿಸುವ ಕೆಲಸವನ್ನ ಕಾರ್ಯಕರ್ತರು ಶ್ರಮಿಸಿದ್ದಾರೆ. ಮೋದಿ ಅಪೇಕ್ಷಗೆ ತಕ್ಕಂತೆ ಭಾರತ ಉತ್ತಮ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತೇವೆ ಎಂದರು.

ಮಲೆನಾಡಿನಂತ ಶಿವಮೊಗ್ಗದಲ್ಲಿ ಪರಿಸರ ಉಳಿಸಿಕೊಂಡು ಅಭಿವೃದ್ಧಿ ಕೆಲಸವಾಗಬೇಕು. ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ. ಗಾಂಜಾ ಸೇವನೆ ಮಾಡುವ ಯುವಕರು ರಾಕ್ಷಸೀಯ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದನ್ನ ತಡೆಹಿಡಿಯುವ ಕೆಲಸವನ್ನ ಎಲ್ಲಾ ಜನಪ್ರತಿನಿಧಿಗಳು ಮಾಡುವಂತೆ ನಮ್ಮವರು ಅಪೇಕ್ಷಿಸಿದ್ದಾರೆ. ಅದರಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು.

೨.೪೩ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಜವಬ್ದಾರಿ ಹೆಚ್ಚಾಗಿದೆ. ದ್ವೇಷದ ಅಪಪ್ರಚಾರ ಚುನಾವಣೆ ವೇಳೆ ನಡೆದಿದೆ. ದ್ವೇಷವನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದ ರಾಘವೇಂದ್ರ ಈ ಬಾರಿ ಮುಂಗಾರು ಕೈಗೊಡುವ ನಿರೀಕ್ಷೆ ಹೆಚ್ಚಾಗಿದೆ. ಈ ವೇಳೆ ರೈತರ ಮತ್ತು ಮತದಾರರ ನೆರವಿಗೆ ಧಾವಿಸುವಂತೆ ಕೆಲಸ ಆಗಬೇಕು ಎಂದರು.

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ, ಕಸ್ತೂರಿ ರಂಗನ ವರದಿ, ಬಗುರ್ ಹುಕುಂ, ಶರಾವತಿ ಮುಳುಗಡೆ ಸಂತ್ರಸ್ತ್ರ ವಿಚಾರ ಬಗೆಹರಿಸಲಾಗುತ್ತಿಲ್ಲ. ಈ ಅವಧಿಯನ್ನ ಸಂಪೂರ್ಣವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳತ್ತೇನೆ ಎಂದರು. ವಿಮಾ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಮಸ್ಯೆ ಹೆಚ್ಚಾಗಿದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ ಎಂಧರು.

ಇದನ್ನ ಖಾಯಂ ಆಗಿ ಏನು ಮಾಡಲು ಸಾಧ್ಯ ಕಾದು ನೋಡಬೇಕು ಎಂದ ಅವರ, ತವರು ಕ್ಷೇತ್ರ ಶಿಕಾರಿಪುರದಲ್ಲಿ ಮತಗಳು ಹೆಚ್ಚು ಪಡೆಯಲಾಗುತ್ತಿಲ್ಲ. ತವರು ಮನೆಯಲ್ಲಿ ಪ್ರತಿಸಲ ೮೭ ಸಾವಿರ ಮತದಾನ ಪಡೆಯಲಾಗುತ್ತಿದೆ ಹೆಚ್ಚಿನ ಮತ ಪಡೆಯಲು ಸಾಧ್ಯವಾಗುತ್ತಿಲ್ಲ ಅದರ ಬಗ್ಗೆ ಕಾರ್ಯಕರ್ತರೊಂದಿಗೆ ಕುಳಿತು ವಿಚಾರಣೆ ಮಾಡುವೆ ಎಂದರು.

ಈ ಬಾರಿ ನಿರೀಕ್ಷೆಯ ಮಟ್ಟದ ಫಲಿತಾಂಶ ದೇಶಮಟ್ಟದಲ್ಲಿ ಬಂದಿಲ್ಲ. ಸ್ವಂತ ಬಲದ ಮೇಲೆ ಬಂದು ಭಾರತವನ್ನ ವಿಶ್ವಗುರಿಯಾಗಿಸುವ ಕನಸು ನನಸಾಗಿಸಲಿದ್ದೇವೆ. ಕುಳಿತು ಚರ್ಚೆ ಮಾಡಲಿದ್ದೇವೆ. ಜನ ಸಂಸದರನ್ನಾಗಿ ನಾಲ್ಕು ಬಾರಿ ಆಯ್ಜೆ ಮಾಡಿದ್ದಾರೆ. ಸಚಿವ ಸ್ಥಾನ ಸಿಗುವ ವಿಷಯ ಸಂಘಟಬೆಗೆ ಬಿಟ್ಟ ವಿಷಯ ಎಂದರು

Share This Article