ರಾಹುಲ್ ಗಾಂಧಿ ನೇತೃತ್ವದಲ್ಲಿ ಉತ್ತಮ ಸಾಧನೆ

Editor Shivamogga Voice
1 Min Read

 

ಶಿವಮೊಗ್ಗ : ರಾಹುಲ್ ಗಾಂಧಿ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎನ್.ರಮೇಶ್ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬಿಜೆಪಿಯವರ ಧರ್ಮ ವಿರೋಧಿ, ಸಂವಿಧಾನ ಬದಲಾವಣೆಯ ವಿಷಯವನ್ನು ಇಟ್ಟುಕೊಂಡು

ಭಾರತ್ ಜೋಡೋ ಯಾತ್ರೆ ಕೈಗೊಂಡ ರಾಹುಲ್ ಗಾಂಧಿ ಇಂದು ವಿಶ್ವಾದಲ್ಲೇ ದೊಡ್ಡ ನಾಯಕರಾಗಿ ಹೊರಹೋಮ್ಮಿದ್ದಾರೆ ಎಂದರು. ಮೋದಿ ಉದ್ಯೋಗ ಕೊಡ್ತೀನಿ, ಜಾತಿ ನಡುವೆ ವಿಷ ಬೀಜ ಬಿತ್ತಿ, ಧರ್ಮ ನಡುವೆ ಬೆಂಕಿ ಹಚ್ಚಿ, ೪೦೦ ಸ್ಥಾನ ಬಂದ್ರೆ ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೇಳಿ ರಾಜಕೀಯ ಮಾಡುತ್ತಿದ್ದ ಬಿಜೆಪಿಗೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ

೪೫ ಸೀಟುಗಳಿಂದ ೯೧ ಸೀಟು ಗಳಿಸಿದ್ದಾರೆ, ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದ ಇವರಿಗೆ ಅಯೋಧ್ಯಯಲ್ಲೇ ಸೋಲಾಗಿದೆ, ಇವರು ನೈತಿಕತೆಯಿಂದ ರಾಜೀ ನಾಮೆ ಕೊಡುವಂತೆ ಒತ್ತಾಯಿಸಿ ದರು

ಕಾಂಗ್ರೆಸ್‌ನವರಿಗೆ ಅಭ್ಯರ್ಥಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದರು.

ಶಿಕಾರಿಪುರದ ನಾಗರಾಜ್ ಗೌಡರು ಮಾತನಾಡುತ್ತಾ ಈ ಚುನಾವಣೆ ಸಹಕಾರಿಸಿದ ಮತ್ತು ಮತದಾನ ಎಲ್ಲಾರಿಗೆ ಕೃತಜ್ಞತೆಗಳು, ನೂತನವಾಗಿ ಸಂಸದರಾಗಿ ಆಯ್ಕೆಯಾದ ಬಿ.ವೈ.ರಾಘವೇಂದ್ರ ಅಭಿನಂದನೆಗಳು, ಎಸ್ ಬಂಗಾರಪ್ಪ ಉತ್ತಮ ಕೆಲಸ ಮಾಡಿದ್ದಾರೆ ಆಗೇ ಮಧು ಬಂಗಾರಪ್ಪ ಉತ್ತಮವಾಗಿ ಕೆಲಸ ಮಾಡ್ತಾ ಇರುವುದರಿಂದ ಅವರಿಗೆ ಸಹೋದರಿಗೆ ಈ ಬಾರಿ ಟಿಕೆಟ್ ನೀಡಲಾಗಿತ್ತು. ಹಾಗು ಕಳೆದ ಬಾರಿ ಸೋಲಿನ ಅನುಕಂಪ ಸಿಗುವ ಲಕ್ಷಣ ಇತ್ತು ಆದ್ದರಿಂದ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತು, ಆದರೆ ಅದು ನಾವು ಅಂದುಕೊಂಡ ರೀತಿ ಆಗಿಲ್ಲ, ಆದರೂ ಬೇಸರವಿಲ್ಲ ಉತ್ತಮ ಬೆಳವಣಿಗೆಯಾಗಿದೆ. ಉತ್ತಮವಾಗಿ ಸಹಕಾರವನ್ನು ಮತದಾರರ ನೀಡಿದ್ದಾರೆ ಎಂದುರ.

ಒಂದು ಕುಟುಂಬದಲ್ಲಿ ಇರುವ ಶಿಕಾರಿಪುರ ಕ್ಷೇತ್ರವನ್ನು ಬದಲಾವಣೆ ಮಾಡಬೇಕು ಎನ್ನುವ ದೃಷ್ಟಿ ಯಿಂದ ಹೆಚ್ಚಿನ ಮತವನ್ನು ಗೀತಾರವರಿಗೆ ಕೊಟ್ಟಿದ್ದಾರೆ ಎಂದರು.

ಸಂದರ್ಭದಲ್ಲಿ ಚಂದ್ರುಭೂಪಲ್, ಅಸಿಫ್ ಮಸೂದೆ ಬಾಬು, ಮುನ್ನ, ಪದ್ಮಾನಾಬ್, ಶಿ ಜು ಪಾಶ, ಧೀರಜ್ ಹೊನ್ನವಿಲೆ ಉಪಸ್ಥಿತರಿದ್ದರು.

Share This Article