ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

Editor Shivamogga Voice
2 Min Read

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

ಶಿವಮೊಗ್ಗ : ಒಂದೇ ಭೂಮಿ-ಒಂದೇ ಪರಿಸರ, ಇದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪರಿಸರ ಸಂರಕ್ಷಣೆಯಿಂದ ಮಾತ್ರ ಉತ್ತಮ ಭವಿಷ್ಯದ ನಿರ್ಮಾಣ ಸಾಧ್ಯ. ವಿಶ್ವ ಪರಿಸರ ದಿನದ ಮೂಲ ಆಶಯ ನಮ್ಮ ಪ್ರಕೃತಿ ಹಾಗೂ ಪರಿಸರವನ್ನು ಉಳಿಸುವುದಾಗಿದೆ. ಪ್ರತಿ ವರ್ಷವೂ ವಿವಿಧ ರಾಷ್ಟ್ರಗಳ ಆತಿಥೇಯ ನಿರ್ವಹಣೆಯ ಜೊತೆಗೆ ವಿಭಿನ್ನ ಧ್ಯೇಯದೊಂದಿಗೆ ಪರಿಸರ ದಿನಾಚರಣೆಯನ್ನು ಆಚರಿಸಲಾ ಗುವುದು. ಹಾಗೆಯೇ ಈ ಭಾರಿ ನಮ್ಮ ಗ್ರಹದಲ್ಲಿ (ಭೂಮಿ) ಹೂಡಿಕೆ ಮಾಡಿ ಎಂಬ ಧ್ಯೇಯದೊಂದಿಗೆ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ಪಿ.ಬಿಂದುಕುಮಾರರವರು ಇಂದು ಬೆಳಗ್ಗೆ ಜಿಲ್ಲಾ ಸ್ಕೌಟ್ ಭವನದಲ್ಲಿ ಸಸಿಗಳನ್ನು ನೆಡಿಸುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳನ್ನು ದ್ದೇಶಿಸಿ ಮಾತನಾಡಿದರು. ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ರವರು ಮಾತನಾಡುತ್ತ ಪರಿಸರದಿಂದ ಪ್ರತಿನಿತ್ಯ ನಾವು ನಮ್ಮ ಆರೋಗ್ಯಕ್ಕೆ ಬೇಕಾದ ಶುದ್ದವಾದ ಗಾಳಿ ಮತ್ತು ಆಹಾರವನ್ನು ಪಡೆಯುತ್ತಿದ್ದೇವೆ. ಪರಿಸರದ ಅಳಿವು-ಉಳಿವು ಮನುಷ್ಯನನ್ನು ಅವಲಂಬಿಸಿದೆ. ಪರಿಸರ ದಿನಾಚರಣೆಯನ್ನು ಕೇವಲ ಗಿಡನೆಡುವುದಕ್ಕೆ ಸೀಮಿತಗೊಳಿಸದೆ ಅದರ ಪಾಲನೆ ಮತ್ತು ಪೋಷಣೆಯ ಬಗ್ಗೆಯು ಗಮನವಹಿಸಬೇಕು ಎಂದು ನುಡಿದರು. ಸಾದ್ಯವಾದಷ್ಟು ಮಟ್ಟಿಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ.

ಇಂದನ ಮಾಲಿನ್ಯ ವನ್ನು ನಿಯಂತ್ರಣ ಮಾಡುವಲ್ಲಿ ಪ್ರತಿನಿತ್ಯ ಸೈಕಲನ್ನು ಬಳಸಿ. ಕಾರ್ಖಾ ನೆಯಿಂದ ಹೊರಹೊಗು ತ್ತಿರುವ ತಾಜ್ಯವನ್ನು ಸರಿಯಾಗಿ ನಿರ್ವಹಣೆ ಯನ್ನು ಮಾಡದಿರುವುದು ಭೂಮಿಯ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕಾಲೇಜಿನ ರೋವರ್ ರೇಂಜರ್ ಗಳು ಪರಿಸರದ ಬಗ್ಗೆ ಮಾತನಾ ಡಿದರು. ಕಾರ್ಯಕ್ರಮದ ನಿರೂಪಕಿಯಾಗಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಾಯಸ್ ರವರು ನಿರ್ವಹಿಸಿದರು ಸ್ವಾಗತ ವನ್ನು ಜಿಲ್ಲಾ ತರಬೇತಿ ಆಯುಕ್ತರಾದ ಹೆಚ್.ಶಿವಶಂಕರ್ ರವರು ನಿರ್ವಹಿಸಿದರು, ವಂದ ಯನ್ನು ಡಿಟಿಸಿ ಗೀತಾ ಚಿಕ್ಕಮಠ ರವರು ನಿರ್ವಹಿಸಿದರು. ಶಿವಮೊಗ್ಗ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಎ.ವಿ.ರಾಜೇಶ್ ರವರು ಪರಿಸರದ ಮಹತ್ವದ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಖಜಾಂಚಿ ಚೂಡಾಮಣಿ ಇ ಪವಾರ, ಕೇಂದ್ರ ಸ್ಥಾನಿಕ ಆಯುಕ್ತ ರಾದ ಕೆ.ರವಿ, ರಾಘವೇಂದ್ರ, ಎ.ಎಲ್.ಟಿಗಳಾದ ಮೀನಾಕ್ಷಮ್ಮ, ಹೇಮಲತಾ, ಗೈಡರ‍್ಸ್‌ಗಳಾದ ಶಾಂತಮ್ಮ, ನಾಗರತ್ನಮ್ಮ, ವಿವಿಧ ಕಾಲೇಜಿನ ೧೦೦ ರೋವರ‍್ಸ್-ರೇಂಜರ‍್ಸ್, ಸ್ಕೌಟ್ಸ್, ಗೈಡ್ಸ್‌ಗಳು ಭಾಗವಹಿಸಿ ದ್ದರು.

Share This Article