ಬಿಜೆಪಿ ಕುಟುಂಬ ರಾಜಕಾರಣದಿಂದ ಬಿಡುಗಡೆಯಾಗಬೇಕು : ಕೆ.ಎಸ್.ಈಶ್ವರಪ್ಪ

Editor Shivamogga Voice
2 Min Read

ಬಿಜೆಪಿ ಕುಟುಂಬ ರಾಜಕಾರಣದಿಂದ ಹೊರಬರಬೇಕು : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಕೇವಲ ಅಪ್ಪ-ಮಕ್ಕಳಿಗಷ್ಟೇ ಬಿಜೆಪಿ ಸೀಮಿತವಾಗಿದೆ, ಅದರಿಂದ ಹೊರ ಬಂದಿಲ್ಲ ವೆಂದರೇ ಪಕ್ಷಕ್ಕೆ ಉಳಿಯುವುದಿಲ್ಲ ಎಂದು ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಾರ್ಯಕರ್ತರು ತಮ್ಮ ಕಷ್ಟ ಯಾರ ಬಳಿ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ, ಇಲ್ಲಿ ಪಕ್ಷದ ಸಂಘಟನೆಯ ಬೆಲೆ ಇಲ್ಲ, ಇಲ್ಲಿ ಏನೇ ಆದ್ರೂ ತಂದೆ ಮಕ್ಕಳ ತೀರ್ಮಾ ನಾವೇ ಅಂತಿಮವಾಗಿದೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪನವರಿಂದ ಲಿಂಗಾಯತ ಸಮುದಾಯ ಬಿಜೆಪಿ ಜೊತೆ ಆದರೇ ಇದು ಒಂದೇ ಸಮುದಾಯ ಸಾಕ, ಬೇರೆ ಸಣ್ಣ ಪುಟ್ಟ ಸಮುದಾಯ ಬೇಡವಾ ಎಂದು ಪ್ರಶ್ನಿಸಿದರು. ಈ ಬಾರಿ ಜೆಡಿಎಸ್ ಜೊತೆ ಸೇರಿ ಉತ್ತಮ ಫಲಿತಾಂಶ ಬಂದಿದೆ, ಕುರುಬರ ಸಮು ದಾಯಕ್ಕೆ ಯಾವುದೇ ಸ್ಥಾನಮಾನ ಕೊಟ್ಟಿಲ್ಲ ಎಂದು ದೂರಿದರು.

ನಾನು ನಿಲ್ಲಬೇಕಾದರೆ ಗೆಲ್ಲುವ ನಿರೀಕ್ಷೆ ಇರಲಿಲ್ಲ, ಆರಂಭದಲ್ಲಿ ಉತ್ತಮ ಬೆಂಬಲ ಸಿಕ್ಕಿತ್ತು, ಆದರೇ ಮೋದಿ ಪ್ರಭಾವದಿಂದ ಬಿಜೆಪಿ ಗೆದ್ದಿದ್ದು ಕಳೆದ ಬಾರಿ 25 ಗೆದ್ದು ಬಿಜೆಪಿಗೆ 17 ಸ್ಥಾನ ಬಂತು ಇದಕ್ಕೆ ಕಾರಣ ಅಪ್ಪ ಮಕ್ಕಳು ಎಂದು ಕುಟುಕಿದರು.

ಕೆಲ ಹಿಂದುಳಿದ ವರ್ಗದ ಸಮುದಾಯವನ್ನು ಕಡೆಗಣಿಸಿದ ಕಾರಣ ಈ ಸ್ಥಿತಿ ಬರಲು ಕಾರಣ, ಹಿಂದುಳಿದ ಮತ್ತು ದಲಿತರಿಗೆ ಶಕ್ತಿ ತುಂಬಲು ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದ್ದೇ, ಆದರೇ ಅದನ್ನು ಹೈಕಮಾಂಡ್ ದೂರು ಕೊಟ್ಟು ತಡೆದರು ಅದನ್ನು ಬ್ರೇಕ್ ಹಾಕಿದರು, ನನ್ನ ಮೇಲೆ ಆಪಾದನೆ ಬಂದ ತಕ್ಷಣ ರಾಜೀನಾಮೆ ಕೊಟ್ಟೆ, ಅದು ತಪ್ಪಿಸ್ಥ ಇಲ್ಲ ಎಂದಾದರೂ ಕ್ಯಾಬಿನೆಟ್ ತೆಗೆದುಕೊಂಡಿಲ್ಲ. …?

ವಿಧಾನಸಭೆಯಲ್ಲಿ ಚುನಾವಣೆ ನಿಲ್ಲಬೇಕು ಎಂದು ಒತ್ತಡ ಬಂತು, ಆದರೇ ದೆಹಲಿಯಿಂದ ಫೋನ್ ಬಂತು ಆದ್ದರಿಂದ ನಾನು ಸ್ಪರ್ಧೆ ಮಾಡಿಲ್ಲ, ಅದಕ್ಕಾಗಿ ಪಕ್ಷ ನಿಷ್ಠೆ ಬಗ್ಗೆ ಅಭಿನಂದನೆ ಸಲ್ಲಿಸಿದರು, ನಿಮಗೆ ಮತ್ತು ನಿಮ್ಮ ಮಗನಿಗೆ ಏನಾದ್ರು ಮಾಡ್ತೀವಿ ಎಂದ್ರು, ನಾನು ಸಂಘಟನೆಯ ಜವಾಬ್ದಾರಿ ಕೊಡಿ ಎಂದಿದ್ದೇನೆ, ಯಡಿಯೂರಪ್ಪನವರು ನಿಮ್ಮ ಮಗನಿಗೆ ಹಾವೇರಿಯಲ್ಲಿ ಟಿಕೆಟ್ ಕೊಟ್ಟು ಗೆಲ್ಲಿಸ್ತೀವಿ ಎಂದ್ರು, ನಾನು ಯಾರಿಂದಲೂ ಉತ್ತರ ನಿರೀಕ್ಷೆ ಮಾಡಿಲ್ಲ ಎಂದರು.

ನಮ್ಮ ರಾಜ್ಯದಲ್ಲಿ ಎಂಪಿ ೨೫ ಬಂದಿದ್ರೆ ಈ ಸ್ಥಿತಿ ಬರುತ್ತಾ ಇಗ್ಲಿಲ್ಲ ಎಂದರು. ಪಕ್ಷ ಉಳಿಯಲು ಕಾರ್ಯಕರ್ತರು ನೀವು ಕಷ್ಟ ಪಡುತ್ತಿದ್ದಾರೆ ಆದರೇ ನಿಮ್ಮ ಇಬ್ಬರು ಮಕ್ಕಳಿಗೆ ಅಧಿಕಾರ ಸಿಕ್ಕರೆ ಸಾಕು, ನಮ್ಮ ದೇಶಕ್ಕೆ ಬಿಜೆಪಿ ಒಂದೇ ಆಶಾಕಿರಣ, ನನಗೆ ಯಾರ ಮೇಲು ದ್ವೇಷವಿಲ್ಲ,

ಸಂಘಟನೆ ಶಕ್ತಿ ಜೊತೆ ಮೋದಿ ಅಲೆ ಇದೆ, ಲಿಂಗಾಯತ ಮತ್ತು ಒಕ್ಕಲಿಗರ ಜೊತೆ ಹಿಂದುಳಿದವರಿಗೆ ದಲಿತರಿಗೆ ಅವಕಾಶ ಕೊಡಿ, ಅವರ ಜನಸಂಖ್ಯೆ ಕಡಿಮೆ ಇದೆ ಎಂದು ತುಳಿದು ಎಷ್ಟು ಸರಿ, ನನ್ನ ಸ್ಪರ್ಧೆಯ ಚರ್ಚೆ ಅಗಿಲಿ ಎಂದು ಸೋಲು ಗೆಲುವ ಅಲ್ಲಾ, 35 ವರ್ಷದಿಂದ ಬಿಜೆಪಿ ಸೇವೆ ಸಲ್ಲಿಸಿದ್ದೇನೆ, ನಾನು ನಿಜವಾದ ದೇಶ ಭಕ್ತ, ಹಿಂದುತ್ವ ವಾದಿ 

 

Share This Article