ಜೂನ್ ೮-೯ಕ್ಕೆ ದೇಸಿ ಬೀಜೋತ್ಸವ

Editor Shivamogga Voice
1 Min Read

 

ಶಿವಮೊಗ್ಗ : ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜೂ.೮ ರಿಂದ ಎರಡು ದಿನಗಳ ಕಾಲ ದೇಸಿ ಬೀಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲಿಕಾರ್ಜುನ ಬಿ.ಎಮ್.ತಿಳಿಸಿದರು.

ಅವರು ಪತ್ರಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೆಳದಿ ಶಿವಪ್ಪನಾಯಕ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾಪನಗಳ ಮಹಾವಿದ್ಯಾಲಯ ಶಿವಮೊಗ್ಗ, ಸಾವಯುವ ಕೃಷಿ ಸಂಶೋಧನಾ ಕೇಂದ್ರ ಶಿವಮೊಗ್ಗ ಸಂಯುಕ್ತ ಆಶ್ರಯದಲ್ಲಿ ಈ ದೇಸಿ ಬೀಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ಸುಮಾರು ೧೦೦ ರೈತರು ವಿವಿಧ ಕಡೆಯಿಂದ ಆಗಮಿಸಿ ದೇಸಿ ತಳಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜೊತೆ ದೇಸಿ ಬೀಜಗಳು ಸಿಗಲಿದೆ ಎಂದು ತಿಳಿಸಿದರು.

ದೇಸಿ ಬೀಜೋತ್ಸವದಲ್ಲಿ ಸ್ಥಳೀಯವಾಗಿ ಸಿಗುವ ಸಾವಯುವ ಕೃಷಿ ಮೂಲಕ ಬೆಳೆದ ಪದಾರ್ಥಗಳನ್ನು ಮತ್ತು ಬೀಜಗಳ ಮಾರುಕಟ್ಟೆಯನ್ನು ಕಲ್ಪಿಸಲಾಗಿದೆ. ಇಂತಹ ಸಾವಯುವ ಕೃಷಿ ಮೂಲಕ ಬೆಳೆದ ಪದಾರ್ಥಗಳ ಸೇವೆನೆಯಿಂದ ಯಾವುದೇ ಅಡ್ಡ ಪರಿಣಾಮ ಆರೋಗ್ಯ ಉಂಟಾಗುವುದಿಲ್ಲ ಎಂದರು.

ಸಾರ್ವಜನಿಕರು ಈ ದೇಸಿ ಬೀಜೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇದರ ಉಪಯೋಗವನ್ನು ಪಡೆಯಬೇಕು ಎಂದು ತಿಳಿಸಿದರು.

ಇದನ್ನು ಮುಂದಿನ ಇನ್ನೂ ದೊಡ್ಡ ಮಟ್ಟದ ಆಯೋಜನೆ ಮಾಡುವ ಉದ್ದೇಶವಿದೆ, ಅದಕ್ಕೆ ಬೇಕಾಗಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಾಗೂ ಪ್ರತಿ ಕೃಷಿ ಚಟುವಟಿಕೆಗಳಿಗೆ ಸಾವಯುವ ಕೃಷಿ ಬೀಜಗಳನ್ನು ಬಳಸವಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಬಸವಕೇಂದ್ರ ಬಸವ ಮರುಳಸಿದ್ದ ಸ್ವಾಮೀಜಿ ವಹಿಸುವರು, ಮುಖ್ಯಅತಿಥಿಗಳಾಗಿ ಉಪಕುಲಪತಿಗಳಾದ ಡಾ.ಜಗದೀಶ್ ಆರ್.ಸಿ., ಸಹಜ ಸಮೃದ್ಧ ನಿರ್ದೇಶಕರಾದ ಜಿ.ಕೃಷ್ಣಪ್ರಸಾದ್, ಸಾವಯುವ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ.ಎಸ್.ಪ್ರದೀಪ್, ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ ಹೊಸಪಾಳ್ಯ, ಐಕಾಂತಿಕ ಸಂಸ್ಥೆಯ ರಾಘವ, ಚಿನ್ನಿಕಟ್ಟೆ ಸಾವಯುವ ಕೃಷಿಕರಾದ ಶಂಕರ ಎಂ.ದೇವೇಂದ್ರಪ್ಪ, ಚುರ್ಚಿಗುಂಡಿ ಸಾವಯುವ ಕೃಷಿಕರಾದ ನಂದೀಶ್ ಭಾಗವಹಿಸುವರೆಂದರು.

ಸಂದರ್ಭದಲ್ಲಿ ಡಾ.ಪ್ರದೀಪ್, ಡಾ.ಸೀಮಾ ಎಸ್.ಆರ್, ಸಂತೋಷ್ ಉಪಸ್ಥಿತರಿದ್ದರು.

Share This Article