ಜೂನ್ ೯ಕ್ಕೆ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ೧೨ನೇ ವರ್ಷದ ವಾರ್ಷಿಕೋತ್ಸವ

Editor Shivamogga Voice
1 Min Read

 

ಶಿವಮೊಗ್ಗ : ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ೧೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜೂನ್ ೯ರ ಭಾನುವಾರ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷರಾದ ಜಿ.ಕೆ.ಮಾಧವ ಮೂರ್ತಿ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠಂ, ಶ್ರೀಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಬೆಳಿಗ್ಗೆ ೧೦ ಗಂಟೆಗೆ ತಮ್ಮ ಅಮೃತ ಹಸ್ತದಿಂದ ಅಮ್ಮನವರಿಗೆ ಕುಂಭಾಭಿಷೇಕ ಅಮ್ಮನವರ ಸನ್ನಿಧಿಯಲ್ಲಿ ಚಂಡಿಕಾಹೋಮ, ಕಲಾತತ್ವ ಹೋಮ, ಮಧ್ಯಾಹ್ನ ೧೨-೦೦ಕ್ಕೆ ಮಹಾ ಪೂರ್ಣಾಹುತಿ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಅದೇ ದಿನ ಮಧ್ಯಾಹ್ನ ೧೨.೩೦ಕ್ಕೆ ಪೂಜ್ಯ ಜಗದ್ಗುರುಗಳವರ ಆಶೀರ್ವಚನ ನಡೆಯಲಿದೆ ನಂತರ ಮಹಾಪ್ರಸಾದ ವಿನಿಯೋಗ, ಅಂದು ಸಂಜೆ ೫-೦೦ ಗಂಟೆಗೆ ಪೂಜ್ಯ ಜಗದ್ಗುರುಗಳವರ ಆಮೃತ ಹಸ್ತದಿಂದ ಶ್ರೀಚಕ್ರ ನವಾವರಣ ಪೂಜಾ ನಂತರ ಅನುಗ್ರಹದ ಫಲಮಂತ್ರಾಕ್ಷತೆ ವಿತರಣೆ ಮಾಡುಲಾಗುವುದು ಎಂದು ತಿಳಿಸಿದರು.

ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ರಾಜಗೋಪುರ ನಿರ್ಮಾಣದ ಕೆಲಸ ಪ್ರಾರಂಭವಾಗಿದ್ದು ಸುಮಾರು ೫೦ ಲಕ್ಷ ವೆಚ್ಚದಲ್ಲಿ ೫೧ ಅಡಿ ಗೋಪುರದ ನಿರ್ಮಾಣದ ಕಾರ್ಯಕೈಗೊಳ್ಳಲಾಗಿದೆ. ಈ ಕಾರ್ಯದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನ ಸಹಾಯ ಮಾಡಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.

ದೇವಸ್ಥಾನ ಧನ ಸಹಾಯ ಮಾಡುವವರು ಬ್ಯಾಂಕ್ ಖಾತೆ ೭೪೪೮೦೧೦೦೦೦೨೮೩೬, ಐಎಫ್‌ಎಸ್‌ಸಿ ಕೋಡ್,  ಶ್ರೀ ಅನ್ನಪೂರ್ಣೇಶ್ವರೀ ಸೇವಾ ಸಮಿತಿ, ಬ್ಯಾಂಕ್ ಆಫ್ ಬರೋಡ, ನವುಲೆ ಶಿವಮೊಗ್ಗ ಇಲ್ಲಿಗೆ ಸಲ್ಲಿಸಬಹುದು.

ಹೆಚ್ಚಿನ ವಿವರಗಳಿಗೆ ಅಮ್ಮನವರ ಪ್ರಧಾನ ಅರ್ಚಕರು, ಅಥವಾ ಕಾರ್ಯಾಧ್ಯಕ್ಷರ ಮೊ : ೭೬೭೬೦೩೦೬೬೦, ೯೮೪೫೧೧೧೯೨೬ ಸಂಪರ್ಕಿಸಬಹುದು.

ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಬಿ.ಕೆ.ಬೆನಕಪ್ಪ,ಉಪಾಧ್ಯಕ್ಷರಾ ಎನ್.ಹೆಚ್.ಪ್ರಭಾಕರ್, ಕಾರ್ಯದರ್ಶಿ ಎಮ್.ಆರ್.ಬಸವರಾಜ್, ಖಜಾಂಚಿ ಬಿ.ಜಿ.ಧನರಾಜ್, ಕಾರ್ಯಾಧ್ಯಕ್ಷರಾದ ಮಂಜುನಾಥ್ ಸಿ.ಪಾಟೀಲ್ ಉಪಸ್ಥಿತರಿದ್ದರು.

Share This Article