ರೈತ ಸಂಘ ಮತ್ತು ಹಸಿರು ಸೇನೆ, ಸಹ್ಯಾದ್ರಿ ರಂಗ ತರಂಗ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಜೂ.೯ರಂದು ಸಂಜೆ ೬ ಗಂಟೆಗೆ ಡೈರೆಕ್ಟ್ ಆಕ್ಷನ್ ನಾಟಕ

Editor Shivamogga Voice
1 Min Read

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಡೈರೆಕ್ಟ್ ಆಕ್ಷನ್

ಶಿವಮೊಗ್ಗ : ರೈತ ಸಂಘ ಮತ್ತು ಹಸಿರು ಸೇನೆ, ಸಹ್ಯಾದ್ರಿ ರಂಗ ತರಂಗ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಜೂ.೯ರಂದು ಸಂಜೆ ೬ ಗಂಟೆಗೆ ಡೈರೆಕ್ಟ್ ಆಕ್ಷನ್ ನಾಟಕ (ಆಡಿಚಿmಚಿ) ಪ್ರದರ್ಶನ ಆಯೋಜಿಸಲಾಗಿದೆ. ಇದು ಪ್ರೊ. ಎಂ.ಡಿ.ನಂಜುಂಡಸ್ವಾಮಿ ಹೋರಾಟದ ಕಥೆಯ ನಾಟಕ ಎಂದು ನಾಟಕದ ನಿರ್ದೇಶಕ ಕಾಂತೇಶ ಕದರಮಂಡಲಗಿ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಾಂತೇಶ ಕದರಮಂಡಲಗಿ, ನಟರಾಜ್ ಹುಳಿಯಾರ್ ಅವರು ನಾಟಕ ರಚಿಸಿದ್ದಾರೆ. ಕೆ.ಯುವರಾಜ್ ಅವರ ಗಾಯನ, ಮಂಜುನಾಥ ಕೂದುವಳ್ಳಿ ಬೆಳಕು ನೀಡಿದ್ದಾರೆ. ಡಾ. ನಾಗಭೂಷಣ್ ಅವರು ಪ್ರೊ. ನಂಜುಂಡಸ್ವಾಮಿ ಅವರ ಪಾತ್ರ ನಿರ್ವಹಿಸಲಿದ್ದಾರೆ. ಸುಂದರೇಶ್, ಕೆ.ಟಿ.ಗಂಗಾಧರ್ ಸೇರಿದಂತೆ ಹಲವರ ಪಾತ್ರಗಳು ನಾಟಕದಲ್ಲಿ ಕಾಣಸಿಗಲಿವೆ ಎಂದರು.

ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ ‘ನಮ್ಮ ಮನೆ ಜಪ್ತಿ ಮಾಡಿದರೆ ನಿಮ್ಮ ಮನೆ ಜಪ್ತಿ ಮಾಡುತ್ತೇವೆ ಅನ್ನುವ ಡೈರೆಕ್ಟ್ ಆಕ್ಷನ್ ರಾಜ್ಯದಲ್ಲಿತ್ತು. ರೈತರ ಮನೆ ಜಪ್ತಿ ಮಾಡಿದವರ ಮನೆಯನ್ನು ರೈತರು ಜಪ್ತಿ ಮಾಡುತ್ತಿದ್ದರು. ಇದು ಮೊದಲು ಶುರುವಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಭದ್ರಾವತಿ ತಹಶೀಲ್ದಾರ್ ಮನೆ ಜಪ್ತಿ ಮಾಡಿದ್ದೆ ಮೊದಲ ಪ್ರಕರಣ. ಅದೆಲ್ಲವು ನಾಟಕದಲ್ಲಿದೆ. ಎಲ್ಲ ವಿದ್ಯಾವಂತ ವರ್ಗ ನಾಟಕ ವೀಕ್ಷಿಸಬೇಕು. ಬೆಂಗಳೂರು, ಶಿವಮೊಗ್ಗ, ಹಾವೇರಿ, ಮೈಸೂರಿನಲ್ಲಿ ಪ್ರದರ್ಶನ ಆಗಿದೆ. ಮುಂದೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟದಲ್ಲಿ ಪ್ರದರ್ಶನ ಆಗಿದೆ ಎಂದರು.

ಪತ್ರಕರ್ತ ಚಂದ್ರೇಗೌಡ ಮಾತನಾಡಿ ‘ಮೊದಲು ಬೆಂಗಳೂರಿನ ನಗ್ನ ಥಿಯೇಟರ್‌ನವರು ನಾಟಕ ಪ್ರದರ್ಶನ ಮಾಡಿದ್ದರು. ಶಿವಮೊಗ್ಗದ ಕಲಾವಿದರೆ ಅಭಿನಯಿಸಿದರೆ ಚನ್ನ ಅಂತಾ ಪ್ರಯತ್ನ ಶುರು ಮಾಡಿದೆವು. ಇದು ಪ್ರೊ. ನಂಜುಂಡಸ್ವಾಮಿ ಅವರ ಕರ್ಮಭೂಮಿ. ಸ್ವಾತಂತ್ರ್ಯ ನಂತರ ಶಾಸನ ಸಭೆಗೆ ಹೋದವರೆಲ್ಲ ರೈತರ ಮಕ್ಕಳು. ಆದರೂ ರೈತರ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ ಪ್ರೊ. ನಂಜುಂಡಸ್ವಾಮಿ ಅವರು ಕುರಿತು ಅರಿಯುವುದು ಇಂದಿಗು ಪ್ರಸ್ತುತ ಎಂದರು.

Share This Article