ಅಲೆಮಾರಿ ಜನಾಂಗಕ್ಕೆ ಪುನರ್ ವಸತಿ ಕಲ್ಪಿಸುವಂತೆ ಆಗ್ರಹ

Editor Shivamogga Voice
2 Min Read

 

ಶಿವಮೊಗ್ಗ : ಜಿಲ್ಲೆಯ ತೀರ್ಥ ಹಳ್ಳಿಯಲ್ಲಿ ಅಲೆಮಾರಿ ಜನಾಂಗವಾದ ದೊಂಬ್ರು, ಹಮ್ ದೋ ಹಮಾರೆ ಬಾರ ಸಿನಿಮಾ ನಿಷೇಧದ ಬಗ್ಗೆ ಹಾಗೂ ಜಾತಿ ಗಣತಿ ಬಗ್ಗೆ ಅಹಿಂಸಾ ಚೇತನ್ ಆಕ್ಷೇಪಿಸಿದೆ. ತೀರ್ಥಹಳ್ಳಿಯ ಕುರುವಳ್ಳಿ ಗ್ರಾಮದಲ್ಲಿ ಅಲೆಮಾರಿ ಜನಾಂಗ ಜಮೀನು ನೀಡಿದರೂ ಪುನರ್ ವಸತಿ ನೀಡದೆ ಇರುವುದು ತಡವಾಗುತ್ತಿರುವ ಬಗ್ಗೆ ಅಹಿಂಸಾ ಚೇತನ್ ಆಕ್ಷೇಪಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಶಾಸಕ ಅರಗ ಜ್ಞಾನೇಂದ್ರ ಶಾಸಕರಾಗಿ ಸಚಿವರಾ ದರೂ ದೊಂಬ್ರು ಜನಾಂಗದ ಬಗ್ಗೆ ಸಂಕಷ್ಟವನ್ನು ಮರೆತಿದ್ದಾರೆ. ಒಂದು ವರ್ಷದಿಂದ ಸಚಿವರಾಗಿ ಮಧು ಬಂಗಾರಪ್ಪ ಬಂದರೂ ಅಲೆಮಾರಿ ಸಮುದಾ ಯದ ಪುನರ್ ವಸತಿ ಬಗ್ಗೆ ಕ್ರಮಕೈಗೊಂಡಿಲ್ಲ. ಸಿದ್ದರಾಮ ಯ್ಯ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗೆಯಾದರೂ ನಿಗದಿತ ಜನಾಂಗಕ್ಕೆ ತಲುಪಿತ್ತಿಲ್ಲ ಎಂದರು.

ಹಮ್ ದೋ ಹಮಾರೆ ಭಾರ ಸಿನಿಮಾಗೆ ಟೈಟಲ್ ಬದಲಾವಣೆ ಆಗಬೇಕಿತ್ತು. ಕೆಲವರು ಟ್ರೈಲರ್ ನೋಡಿ ನಿಷೇಧಿಸುವಂತೆ ಆಗ್ರಹಿಸಿ ದ್ದಾರೆ. ೨೦೨೧ ಬ್ರಾಹ್ಮಣ್ಯದ ವಿರುದ್ಧ, ಹಂಸಲೇಖಾರ ವಾಕ್ ಸ್ವತಂತ್ರ್ಯ ಹೋರಾಟ ನಡೆಸಿದ್ವಿ. ಹಮಾರೆ ಭಾರ ಸಿನಿಮಾ ಬ್ಯಾನ್ ಮಾಡೋದು ವಾಕ್ ಸ್ವತಂತ್ರ್ಯ ಉಲ್ಲಂಘ ಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತರಾಟೆಗೆ ತೆಗೆದುಕೊ ಂಡರು. ಈ ಸಿನಿಮಾಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಸಿನಿಮಾ ನೋಡಿ ಕೆಲ ಯುವಕರು ಕೊಲೆ ಮಾಡಿ ಜೈಲಿಗೆ ಹೋಗು ತ್ತಾರೆ. ನಾನು ಜೈಲಿಗೆ ಹೋದಾಗ ಯುವಕರು ಈ ಬಗ್ಗೆ ಹೇಳಿದ್ದಾರೆ. ಹಮಾರೆ ಬಾರ ಸಿನಿಮಾ ನೋಡೆದ ರಾಜ್ಯ ಸರ್ಕಾರ ಟ್ರೈಲರ್ ನೋಡಿ ಬ್ಯಾನ್ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಬ್ಯಾನ್ ಮಾಡಿ ದ ಸರ್ಕಾರವೂ ಸಹ ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ ಮಾಡಿ ಬ್ಯಾನ್ ಮಾಡಿದರೆ ಹೇಗಿರುತ್ತದೆ. ಹಾಗಾಗಿ ವಾಕ್ ಸ್ವತಂತ್ರ್ಯ ಹತ್ತಿಕ್ಕಬಾರದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಾಶ್ಮೀರ ಫೈಲ್ ಸಿನಿಮಾ ಬ್ಯಾನ್ ಮಾಡಿದ್ದರು. ಇದು ಸರಿಯಲ್ಲ. ನನಗೆ ಹಲವು ಮುಸ್ಲೀಂ ಸಿನಿಮಾಗಳಲ್ಲಿ ಪಾತ್ರ ವಹಿಸಲು ಬಂದಿತ್ತು. ನಾನು ನಟಿಸಿರಲಿಲ್ಲ. ಹಾಗಂತ ಅದನ್ನ ತಿರಸ್ಕರಿಸ ಲಾಗದು ಎಂದರು.

ಜಾತಿ ಜನಗಣತಿ ಬಿಡುಗಡೆ ಮಾಡದೆ ಇರುವುದು ಅನ್ಯಾಯ ವಾಗಿದೆ. ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯ ಇದನ್ನ ವಿರೋಧಿಸಿದಾಗ ಸಿದ್ದರಾಮಯ್ಯ ಅಹಿಂದ ಪರ ನಿಂತಿಲ್ಲ. ಹಾಗಾಗಿ ಅಹಿಂದ ಪರ ನಿಲ್ಲಲು ಸಿದ್ದರಾಮ ಯ್ಯರಿಗೆ ನೈತಿಕ ಹಕ್ಕಿಲ್ಲ. ಚುನಾವಣೆ ಮುಗಿದಿದೆ ಈಗಲಾದರೂ ಜಾತಿ ಗಣತಿ ಜಾರಿಯಾಗಬೇಕು ಎಂದು ಅವರು ಆಗ್ರಹಿಸಿದರು.

ಹಮಾರೆ ಬಾರ ಸಿನಿಮಾದಲ್ಲಿ ಸೆನ್ಸಾರ್ ೧೧ ಡೈಲಾಗ್ ಕಟ್ ಆಗಿದೆ. ಹೈಕೋರ್ಟ್ ಸಿನಿಮಾ ಬಿಡುಗಡೆ ಮಾಡಿ ಎಂದರೂ ರಾಜ್ಯ ಸರ್ಕಾರ ಸಿನಿಮಾನೋಡದೆ ಬ್ಯಾನ್ ಮಾಡಿರುವುದು ಸರಿಯಲ್ಲ. ಏನಾದರೂ ಆಕ್ಷೇಪಣೆ ಇದ್ದರೆ ಸೆನ್ಸರ್ ಬೋರ್ಡ್‌ಗೆ ಹಾಕಬಹು ದಿತ್ತು. ಸಿನಿಮಾ ನೋಂದಣಿಯನ್ನ ಮಾತ್ರ ಎರಡು ವಾರಕ್ಕೆ ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ ಎಂದರು. ಹಿಂದುತ್ವದ ಯುಸಿಸಿ ಅಲ್ಲ ಸಂವಿಧಾನ ಪರವಾದ ಯುಸಿಸಿ ಪರವಾಗಿ ನಾನು ಇದ್ದೇನೆ. ಆದರೆ ಒಂದು ದೇಶ ಒಂದು ಚುನಾವಣೆಗೆ ನನ್ನ ವಿರೋಧವಿದೆ ಇದ್ದರಿಂದ ವೈವಿದ್ಯತೆ ಬಂಗವಾಗಲಿ ದೆ ಎಂದರು. ಇದು ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲವಾಗಲಿದೆ ಹಾಗಾಗಿ ಜೆಡಿಯು ಇದಕ್ಕೆ ಒಪ್ಪಿದೆ. ಇದು ಸರಿಯಲ್ಲ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಜನರ ಪರ ನಿಲ್ತಾರೆ ಎಂಬ ನಂಬಿಕೆ ಇದೆ ಎಂದರು.

ಸಂದರ್ಭದಲ್ಲಿ ಟಿ.ಹೆಚ್ ಹಾಲೇಶಪ್ಪ, ಶಿವಕು ಮಾರ್. ಎಂ.ಆರ್ ಅಸ್ತಿ ಹಾಗೂ ಹಾರೋ ಗುಳಿಗೆ ವಿಶ್ವನಾಥ್ ಉಪಸ್ಥಿತರಿದ್ದರು.

Share This Article