ನನ್ನ ಸೋಲಿಗೆ ನಾನೇ ಹೊಣೆ : ಆಯನೂರು

Editor Shivamogga Voice
2 Min Read

 

ಶಿವಮೊಗ್ಗ : ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೆ ಮತ ಕೊಟ್ಟ-ಕೊಡದೆ ಇರುವ ಎಲ್ಲಾರಿಗೂ ಕೆಪಿಸಿಸಿ ವಕ್ತಾರ ಆಯ ನೂರು ಮಂಜುನಾಥ್ ಹೃದಯ ಪೂರ್ವಕ ಕೃತಜ್ಞತೆ ತಿಳಿಸಿದರು

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಗೆದ್ದಂತಹ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಗೂ ಅಭಿನಂದನೆ ಸಲ್ಲಿಸಿದರು. ನೈರುತ್ಯದವೀಧರ ಕ್ಷೇತ್ರದ ಚುನಾವ ಣೆಯಲ್ಲಿ ಎಲ್ಲಾ ಪದ್ದತಿಗಳನ್ನು ಮುರಿದಿರುವ ದಾಖಲೆಯಾಗಿದೆ, ಮದ್ಯ ಹಂಚಿಕೆ, ಜಾತಿ, ಉಪಜಾತಿ ಲೆಕ್ಕಾಚಾರ, ಮತದಾನಗಳು ಸಹ, ಎಲ್ಲವೂ ದಾಖಲೆ ಪ್ರಮಾಣದಲ್ಲಿ ನಡೆದು ಕಲೂಷಿತಗೊಂಡಿದೆ ಎಂದು ಆರೋಪಿಸಿದರು.

ನನ್ನ ೩೦ ವರ್ಷದ ರಾಜಕೀಯ ದಲ್ಲಿ ಈ ರೀತಿಯ ಚುನಾವಣೆ ನಡೆದಿಲ್ಲ.ನಾನು ಯಾವ ವಾಮಮಾರ್ಗಕ್ಜೆ ಕೈಹಾಕಿಲ್ಲ. ವಿದ್ಯಾವಂತ ಮತದಾರರ ಬಗ್ಗೆ ನೈತಿಕ ಪ್ರಶ್ನೆ ಉದ್ಭವಿಸಿದೆ. ಒಂದು ದಿನದ ಚಪಲಕ್ಕಾಗಿ ಮತದಾರ ಮಾರುಹೋಗಿದ್ದಾನೆ. ಇದೊಂದು ದುರಂತವೆಂದರು.

ಸರ್ಕಾರ ನಮ್ಮದೆ ಇದ್ದರೂ, ನೌಕರರ ನಿವೃತ್ತಿ ವೇತನ ತಾರತಮ್ಯ ಮೊದಲಾದ ವಿಷಯದಲ್ಲಿ ವಿರೋ ಧಿ ನಿಲುವು ಬಂದಾಗ ಸದನದಲ್ಲಿ ನಿಂತು ಬಡಿದಾಡಿರುವೆ. ಯಾವುದೇ ನೌಕರನ ನಿವೃತ್ತಿ ಗೌರವ ದಿಂದ ಇರಬೇಕು ಎಂದಿರುವೆ ನನಗೆ ವಾಮಮಾರ್ಗ ಗೊತ್ತಿಲ್ಲ ಎಂದರು.

ನೌಕರ ವಿಷಯದಲ್ಲಿ ಸ್ಪರ್ಶಿದ ವಿಷಯಗಳೇ ಇರಲಿಲ್ಲ. ಅತಿಥಿ ಉಪನ್ಯಾಸಕರು ನನ್ನನ್ನ ಅನ್ನದಾತರು ಎನ್ನುತ್ತಿದ್ದರು. ಇಂತವರು ಮತದಾನದ ಮೂರು ನಾಲ್ಕು ದಿನಗಳಲ್ಲಿ ಬದಲಾವಣೆ ಆಗಿದ್ದಾರೆ. ಹಣಕ್ಕೆ ಮಾರಿಹೋಗಿದ್ದಾರೆ. ತಮ್ಮ ನಿಲುವನ್ನ ಬದಲಾಯಿಸಿ ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.

ಮತದಾರರ ಆಯ್ಕೆಯನ್ನ ಗೌರವಿಸುವೆ. ಆದರೆ ಗೆದ್ದ ಅಭ್ಯರ್ಥಿ ಕೈಲಾಗದವರ ಕೊನೆಯ ಅಸ್ತ್ರ ಅಪಪ್ರಚಾರ ಎಂದಿದ್ದರು. ಆದರೆ ದುರ್ಬಲ ಅಭ್ಯರ್ಥಿಯ ಕೊನೆಯ ಅಸ್ತ್ರ ಮದ್ಯ ಹಂಚುವಿಕೆಯಾಗಿದೆ. ಹೊನ್ನಾಳಿಯಲ್ಲಿ ನಿಮ್ಮ ಬಗ್ಗೆ ಹಣ ಹಂಚಲು ಹೋಗಿ ಮಹಿಳೆಯೊ ಬ್ಬಳು ಕೆಲಸ ಕಳೆದುಕೊಂಡಿದ್ದಾರೆ. ಆ ಕುಟುಂಬಕ್ಕೆ ಏನುಮಾಡುತ್ತೀರಿ ಎಂದು ಪ್ರಶ್ನಿಸಿದರು.

ನಾನು ವಾಮನಾರ್ಗ ಹಿಡಿದಿಲ್ಲ. ನನಗೆ ಅವಕಾಶವಿಲ್ಲ. ಸೋಲಿನಿಂದ ವಿಚಲಿತನಾಗಿಲ್ಲ. ಆದರೆ ವಿದ್ಯಾವಂತ ಸಮಾಜದ ಆಯ್ಕೆ ಬಗ್ಗೆ ಆಕ್ಷೇಪವಿದೆ. ಚುನಾವಣೆ ನಡೆಯುವವರೆಗೆ ಮದ್ಯ ಹಂಚುತ್ತಿರುವವರು ನಿನ್ನೆಯಿಂದ ಕಾಫಿನೂ ಕೊಡಿಸುತ್ತಿಲ್ಲ ಎಂಬ ಆರೋಪ ಬರುತ್ತಿದೆ. ನನ್ನಲ್ಲಿ ಕೊರತೆ ಇದೆ. ನನ್ನ ಸೋಲಿಗೆ ನಾನೇ ಕಾರಣ ಅದರ ಬಗ್ಗೆ ಚಿಂತಿಸುವೆ ಎಂದರು.

ಚುನಾವಣೆಯಲ್ಲಿ ಮೂರು ತರಹದ ಸೋಲಾಗಿರುತ್ತದೆ. ಒಂದು ಪಕ್ಷದ ಸೋಲು, ಇನ್ನೋಂದು ಅಭ್ಯರ್ಥಿಯ ಸೋಲು ಮತ್ತೊಂದು ಮತದಾರರ ಸೋಲಾಗುತ್ತದೆ. ಪಕ್ಷದ ಸೋಲಾಗಿಲ್ಲ. ಇನ್ನು ಉಳಿದ ಎರಡು ಸೋಲಿನ ಬಗ್ಗೆ ಚಿಂತಿಸಬೇ ಕಿದೆ ಎಂದರು.

ಚುನಾವಣ ರಾಜಕಾರಣ ದಿಂದ ಹಿಂದೆ ಸರಿಯುವ ಬಗ್ಗೆ ಕಾಲಪಕ್ವವಾಗಿಲ್ಲ. ನನ್ನ ಆಂತರಿಕ ಹೋರಾಟಕ್ಕೆ ಹಿನ್ನಡೆಯಾಗಿಲ್ಲ. ಹೋರಾಟಕ್ಕೆ ಚುನಾವಣೆ ಒಂದು ವೇದಿಕೆ ಅಷ್ಟೆ. ಸೋಲು ಗೆಲುವಿಗೆ ಕುಗ್ಗುವ, ಹಿಗ್ಗುವ ಜಾಯಮಾನ ನನ್ನದಲ್ಲ. ಯಾವುದೇ ಹೋರಾ ಟಕ್ಕೂ ನಾನು ಸಿದ್ದ ಎಂದರು.

ಸಮಾಜಕ್ಕೆ ಬೆಳಕು ತೋರುವವರು ಕುಸಿತವಾU ಬಾರದು, ಇದು ಸಾಮಾನ್ಯ ಚುನಾ ವಣೆಯಂತೆ ಚುನಾವಣೆ ಯಾಗಿ ರುವುದು ವಿಪರ್ಯಾಸ, ಕೇವಲ ಕ್ಷಣದ ಸುಖಕ್ಕೆ ಭವಿಷ್ಯ ಕಳೆದುಕೊಳ್ಳುವ ಪರಿಸ್ಥಿತ ಬಂತು ಎಂದು ಬೇಸವಾಗುತ್ತಿದೆ ಎಂದರು.

ಸಂದರ್ಭದಲ್ಲಿ ವೈ.ಹೆಚ್. ನಾಗರಾಜ್, ಶಿ.ಜು.ಪಾಶ, ಚಾಮ ರಾಜ, ಅಡ್ಡು, ನೇತ್ರಾವತಿ, ಪದ್ಮಾ ನಾಭ, ಚೆನ್ನಷ್ ಉಪಸ್ಥಿತರಿದ್ದರು.

Share This Article