ಬಿಜೆಪಿಯ ಹಿರಿಯ ಮುಖಂಡ ಭಾನುಪ್ರಕಾಶ್ ನಿಧನ

Editor Shivamogga Voice
2 Min Read

ಬಿಜೆಪಿಯ ಹಿರಿಯ ಮುಖಂಡ ಭಾನುಪ್ರಕಾಶ್ ನಿಧನ

ಶಿವಮೊಗ್ಗ : ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್(೬೯) ಗೆ ಹೃದಯಾಘಾತವಾಗಿದೆ. ಇಂದು ಬಿಜೆಪಿಯ ಪ್ರತಿಭಟನೆಯಲ್ಲಿ ಭಾಗಿಯಾದ ಭಾನುಪ್ರಕಾಶ್ ಗೆ ಮಾಸಿವ್ ಸ್ಟ್ರೋಕ್ ಹೊಡೆದಿದೆ. ಇದರಿಂದ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆ ೧೧-೧೫ ರ ವೇಳೆಯಲ್ಲಿ ಗೋಪಿ ವೃತ್ತದ ಬಳಿ ಬಿಜೆಪಿ ಪಕ್ಷದ ವತಿಯಿಂದ ಪೆಟ್ರೋಲ್ ಡೀಸೇಲ್ ದರ ಏರಿಕೆ ವಿರೋಧಿಸಿ ಇಂದು ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕರು ಸರ್ಕಾರದ ವಿರುದ್ಧ ಪ್ರತಿಭಟನಾ ಭಾಷಣವನ್ನೂ ಮಾಡಿದ್ದರು.

ಬಹುತೇಕ ಪ್ರತಿಭಟನೆ ಮುಗಿದಿತ್ತು ರಘುಪತಿ ರಾಘವ ಹೇಳಿಕೊಡುತ್ತಿದ್ದ ವೇಳೆ ಸರ್ಕಾರದ ವಿರುದ್ಧ ಮೌನಾಚರಣೆಯನ್ನ ಮಾಡಿಸಿದ್ದರು. ನಂತರ ಸುಸ್ತಾಗು ತ್ತಿದೆ ಎಂದು ವಾಹನಕ್ಕೆ ಹೋಗಿ ಕುಳಿತಿದ್ದರು. ತಕ್ಷಣವೇ ಮ್ಯಾಕ್ಸ್ ಗೆ ದಾಖಲಿಸಲಾಗಿದೆ. ವೈದ್ಯರು ಅವರ ಸಾವನ್ನು ಧೃಢಪಡಿಸಿದ್ದಾರೆ.

೬೨ ವರ್ಷದ ಭಾನುಪ್ರಾಶ್ ಬಿಕಾಂ ಪದವೀಧರರಾಗಿದ್ದರು. ಯಾದವ್ ಕೃಷ್ಣ, ಹರಿಕೃಷ್ಣ ಇಬ್ಬರೂ ಇಂಜಿನಿಯರ್ ಮುಗಿಸಿದ್ದರೆ ಮೂರನೇ ಮಗ ಚಿನ್ಮಯ್ ಪ್ರಸನ್ನ ಕೃಷ್ಣ ಬಿಇ ವಿದ್ಯಾರ್ಥಿ ಆಗಿದ್ದಾರೆ. ಮಗ ಚಿನ್ಮಯ್ ಚೆನ್ನೈನಲ್ಲಿದ್ದರು,.

ಭಾನುಪ್ರಕಾಶ್, ೧೯೬೯ ರಲ್ಲಿ ಆರ್ ಎಸ್ ಎಸ್ ನ ಕಾರ್ಯಕರ್ತರಾಗಿ ಸೇವಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು.

೧೯೭೫ ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸನೂ ಮುಗಿಸಿದ್ದರು. ೧೯೭೭-೮೩ ರ ವರೆಗೆ ಆರ್ ಎಸ್ ಎಸ್ ನ ವಿವಿಧ ಜವಬ್ದಾರಿ ನಿರ್ವಹಿಸಿದ್ದಾರೆ. ೧೯೮೩ ರಿಂದ ರಾಜ್ಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ, ೧೯೮೭-೯೩ ರ ವರೆಗೆ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ೧೯೯೪-೨೦೦೦ ರವರೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದರು.

೨೦೦೦-೨೦೦೫ ರಿಂದ ಜಿಪಂ ಸದಸ್ಯ, ೨೦೦೩ ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ, ೨೦೦೩ ರಿಂದ ೨೦೦೮ ರ ವರೆಗೆ ಜಿಲ್ಲಾ ಅಧ್ಯಕ್ಷರಾಗಿ ಪುನರ್ ಆಯ್ಕೆ, ೨೦೦೭-೨೦೧೦ ರವ ರೆಗೆ ಬಿಜೆಪಿಯರಾಜ್ಯ ಕಾರ್ಯ ದರ್ಶಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ವುಧಾನ ಪರಿಷತ್ ಸದಸ್ಯ, ವಿವಿಧ ಪ್ರಕೋಷ್ಠಗಳ ರಾಜ್ಯ ಸಂಯೋಜಕ, ಮಲೆನಾಡು ಕ್ಲಸ್ಟರ್ ನ ಪ್ರಭಾರಿಯಾಗಿ ಸೇವೆ ಸಲ್ಲಿಸಿ ದ್ದಾರೆ.

ಭಾನುಪ್ರಕಾಶ್ ಕಣ್ಣು ದಾನ : ಭಾನುಪ್ರಕಾಶ್ ನಿಧನಕ್ಕೆ ಮತ್ತೂರಿನಲ್ಲಿ ಶ್ರದ್ಧಾಂಜಲಿ ಸಭೆ ನಡೆದಿದೆ. ಶ್ರದ್ಧಾಂಜಲಿಯ ಸಮಯದಲ್ಲೇ ಮೃತರ ಕಣ್ಣನ್ನ ಶಂಕರ ಕಣ್ಣಿನ ಆಸ್ಪತ್ರೆಗೆದಾನ ಮಾಡಲಾಯಿತು.

ಭಾನುಪ್ರಕಾಶ್ ಅಂತ್ಯಕ್ರಿಯೆ : ಹೃದಯಾಘಾತದಿಂದ ನಿಧನರಾ ಗಿದ್ದ ಮಾಜಿ ಎಂಎಲ್ ಸಿ ಭಾನುಪ್ರಕಾಶ್ ಅವರ ಅಂತ್ಯಕ್ರಿಯೆ ಮತ್ತೂರಿನ ತುಂಗನದಿಯ ದಡದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.

ಮ್ಯಾಕ್ಸ್ ಆಸ್ಪತ್ರೆಯಿಂದ ಕರೆತಂದು ಮತ್ತೂರಿನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕಾಂಗ್ರಶ್‌ನ ಶ್ರೀಕಾಂತ್ ಅಂತಿಮ ದರ್ಶನ ಪಡೆದಿದ್ದಾರೆ. ಬಿಜೆಪಿ ನಾಯಕರು ಅಂತಿಮ ದರ್ಶನ ಪಡೆದರು.

ಸ್ಥಳದಲ್ಲಿ ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ್ಯದ ಮುಖಂಡ ಪಟ್ಟಾಭಿರಾಮ್, ಶಾಸಕ ಚೆನ್ನಬಸಪ್ಲ ಸ್ಥಳದಲ್ಲೇ ಇದ್ದು ಪ್ರತಿಯೊಬ್ಬ ಕಾರ್ಯಗಳನ್ನು ನೋಡಿಕೊಂಡರು.

Share This Article