“ದಿ. ದೇವರಾಜ್ ಅರಸು ಭವನ” ಕಾಮಗಾರಿಗೆ ಅನುದಾನ ಮಂಜೂರು

Editor Shivamogga Voice
2 Min Read

 

 

ಶಿವಮೊಗ್ಗ ನಗರದ ಬಾಲ ರಾಜ್ ಅರಸ್ ಇಲ್ಲಿ “ದಿ. ದೇವರಾಜ್ ಅರಸು ಭವನ”ವನ್ನು ನಿರ್ಮಾಣಗೊಂಡಿರುತ್ತದೆ. ಸದರಿ ಕಾಮಗಾರಿ ಪೂರ್ಣಗೊಳಿಸಲು ರೂ. ೩.೦೦ ಕೋಟಿಗಳ ಅನುದಾನ ಬಿಡುಗಡೆಗೊಳಿಸಿದ್ದಾರೆಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ವಿ.ರಾಜು ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚೆಗೆ ೨೦೧೯ರ ವರದಿ-೨೦೧೪ರಂದು ಸ್ವೀಕರಿಸು ವುದನ್ನು ಸರ್ಕಾರವು ವರದಿಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ ಸಾರ್ವಜನಕವಾಗಿ ಬಹಿರಂಗಗೊ ಳಿಸಬೇಕೆಂದು ಮತ್ತು ಅದರ ಅಂಕಿ-ಅಂಶಗಳನ್ನು ಅಧ್ಯಯನ ನಡೆ ಲು,ಉನ್ನಮಟ್ಟದ ಸಮಿತಿಯನ್ನು ರಚಿಸಬೇಕೆಂದು ಸರ್ಕಾರಕ್ಕೆ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ (ರಿ) ಒತ್ತಾಯಿಸುತ್ತದರು.

ನೂತನ ಭಾರತ ಸರ್ಕಾರವು ದೇಶದಾದ್ಯಂತ “ಸಾಮಾಜಿಕ ಶೈಕ್ಷಣಿಕ ಜನಗಣತಿ ಸಮೀಕ್ಷೆ” ನಡೆಸಬೇಕೆಂದು ಒಕ್ಕೂಟವು ಒತ್ತಾಯಿಸುತ್ತವೆ ಎಂದರು. ಸರ್ವೋಚ್ಛ ನ್ಯಾಯಾಲದ ಆಶಯದಂತೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯ ಮಂತ್ರಿಯಾಗಿದ್ದಾಗ ಅವರ ಆಡಳಿತಾವಧಿಯಲ್ಲಿ ಹಿಂದುಳಿದ ಆಯೋಗದ ವತಿಯಿಂದ ಕಾಂತ ರಾಜ್ ವರಧಿಯನ್ನು ಸಿದ್ಧಪಡಿಸಿ ದ್ದು ಇದು ಎಲ್ಲ ಸಮುದಾಯಗಳ, ಸಾಮಾಜಿಕ, ಆರ್ಥಿಕ ಹಾಗು ಶೈಕ್ಷಣಿಕ ಸಮೀಕ್ಷೆಯಾಗಿದ್ದು ಮಾನ್ಯ ಮುಖ್ಯ ಮಂತ್ರಿಗಳು ಇದನ್ನು ಸ್ವೀಕರಿಸಿ ಸಾವರ್ಜನಿಕ ಚರ್ಚೆ ಬಿಟ್ಟು ಅನುಷ್ಠಾನಗೊಳಿಸಲು ಒಕ್ಕೂ ಟ ಒತ್ತಾಯಿಸುತ್ತದೆ ಎಂದರು.

ಭಾರತದ ಜನಗಣತಿ ಸಮೀಕ್ಷೆ ೨೦೨೧ರಲ್ಲಿ ನಡೆಯಬೇಕಾಗಿದ್ದು (೧೦ ವರ್ಷಗಳಿಗೊಮ್ಮೆ) ಇಲ್ಲಿಯವಗೂ ನಡೆಸಿರುವುದಿಲ್ಲ. ಕೂಡಲೇ ಸರ್ಕಾರವು ಜನಣತಿ ಸಮೀಕ್ಷೆ ನಡೆಸಬೇಕು.

ಭಾರತದ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯ, ಆರ್ಥಿಕವಾಗಿ, ಮತ್ತು ರಾಜಕೀಯ ಮೀಸಲಾತಿ ಯನ್ನು ನೀಡಬೇಕೆಂದು. ಇದಕ್ಕೆ ಕೇಂದ್ರ ಸರ್ಕಾರವು ಸಂವಿಧಾನ ತಿದ್ದುಪಡಿಯನ್ನು ಮಾಡಿ ಜಾರಿಗೆ ತರಬೇಕೆಂದು ಜಿಲ್ಲೆಯ ಒಕ್ಕೂಟದ ಸ್ಥಾಪಕರು, ಮಾಜಿ ಮಂಡಲ ಪ್ರಧಾನರು, “ಜನತಾದಳದ ಮಾಜಿ ಅಧ್ಯಕ್ಷರಾಗಿ ಉತ್ತಮ ಹಿಂದುಳಿದ ಸಮುದಾಯಗಳ ಬಗ್ಗೆ ಹೆಚ್ಚು ಕಾಳಜಿ ಹೊಂದಿದವರಾಗಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಶಿವಮೊಗ್ಗದ ಗ್ರಾಮಾಂತರದ ಹೊಳೆಹೊನ್ನೂರಿನ ಹೆಚ್. ಆರ್. ತಿಮ್ಮಪ್ಪನವರು ಈ ದಿನ ಅನಾರೋಗ್ಯ ನಿಮಿತ್ತ ನಿಧನಾ ಗಿರುತ್ತಾರೆ. ಜಿಲ್ಲಾ ಹಿಂದುಳಿದ ಜಾತಿ ಒಕ್ಕೂಟ ಶ್ರದ್ಧಾಂಜಲಿ, ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಮತ್ತು ಒಬಿಸಿಯ ಹಿರಿಯ ಮುಖಂಡರು ಮಾಜಿ ವಿಧಾನ ಪರಿಷತ್ತು ಸದಸ್ಯರಾದ ಶ್ರೀ ಎಂ.ಬಿ ಬಾನುಪ್ರಕಾಶ್ (೬೭ ವರ್ಷ) ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಇತ್ತೀಚೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಉದ್ಯೋಗಗಳಲ್ಲಿ “ಮೀಸಲಾತಿ ಅನ್ವಯಿಸುವುದನ್ನು” ಕಡ್ಡಾಯ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಲ್ಲಿ ಸುಮಾರು ೯ ಲಕ್ಷಕ್ಕೂ ಹೆಚ್ಚು ಸರ್ಕಾರದ ಹುದ್ದೆಗಳು ಖಾಲಿ ಇರುತ್ತದೆ. ಉಪಾಧ್ಯಕ್ಷರಾದ ಹಿರಿಯರೂ ಕರ್ನಾಟಕದಲ್ಲಿ ಹಲವು ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇರುತ್ತದೆ. ಇದನ್ನು ಸರ್ಕಾರವು ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.ಖಾಸಗಿ ವಲಯದಲ್ಲಿಯೂ ಮೀಸಲಾತಿ ಯನ್ನು ಜಾರಿಗೆ ತರಬೇಕು. ಕೇಂದ್ರ ಸರ್ಕಾರವು ಸಾರ್ವಜನಿಕ ಉದ್ದಿಮೆಗಳನ್ನು ಮನಸೋ ಇಚ್ಛೆ ಖಾಸಗೀಕರಣಗೊಳಿಸುರುವುದನ್ನು ಖಂಡಿಸಿದರು

ಸಂದರ್ಭದಲ್ಲಿ ಎಸ್ ಬಿ. ಅಶೋಕ್ ಕುಮಾರ್, ಆರ್.ಕೆ ಸಿದ್ಧರಾಮಣ್ಣ ಉಪಸ್ಥಿತರಿದ್ದರು.

Share This Article