ಚೆಫ್ ಚಿದಂಬರ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಸಂತಸ ತಂದಿದೆ

Editor Shivamogga Voice
1 Min Read

ಚೆಫ್ ಚಿದಂಬರ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಸಂತಸ ತಂದಿದೆ : ಅನಿರುದ್ಧ

ಶಿವಮೊಗ್ಗ : ಚೆಫ್ ಚಿದಂಬರ ಚಿತ್ರವು ಇದೇ ಜೂನ್ ೧೪ ರಂದು ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರದ ನಾಯಕ ನಟ ಅನಿರುದ್ಧ ಜಟ್ಕರ್ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಚಿತ್ರವನ್ನು ಎಂ ಆನಂದರಾಜ್ ನಿರ್ದೇಶನ ಮಾಡಿ ದ್ದಾರೆ. ನನ್ನ ಜೊತೆಗೆ, ಚಿತ್ರದಲ್ಲಿ ರಾಚೆಲ್ ಡೇವಿಡ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ನಟರಾದ ಶರತ್ ಲೋಹಿತಾಶ್ವ, ಶಿವಮಣಿ, ಕೆಎಸ್ ಶ್ರೀಧರ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಡಾರ್ಕ್ ಕಾಮಿಡಿ ಕ್ರೈಮ್ ಥ್ರಿಲ್ಲರ್ ಎಂದು ಬಿಂಬಿ ಸಲಾದ ಚೆಫ್ ಚಿದಂಬರ ಚಿತ್ರವು ಮೃತದೇಹದ ಸುತ್ತ ಸುತ್ತುತ್ತದೆ ಎಂದರು.’

ಚಿತ್ರವು ಚಿದಂಬರ ಅಪರಾ ಧದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾನೆಯೇ ಅಥವಾ ಅದರಲ್ಲಿ ಸಿಕ್ಕಿಬಿದ್ದಿದ್ದಾನೆಯೇ ಎಂಬುದನ್ನು ಅನ್ವೇಷಿಸುತ್ತದೆ. ಶರತ್ ಲೋಹಿತಾಶ್ವ ಪೊಲೀಸ್ ಅಧಿಕಾ ರಿಯ ಪಾತ್ರದಲ್ಲಿ ಕಾಣಿಸಿ ಕೊಂ ಡಿದ್ದಾರೆ’ ಎಂದು ವಿವರಿಸುತ್ತಾರೆ.

’ಚೆಫ್ ಚಿದಂಬರ’ ಚಿತ್ರದ ಶೀರ್ಷಿಕೆ ಗೀತೆಗೆ ನಾನೇ ಧ್ವನಿ ನೀಡಿ ದ್ದೇನೆ. ರೂಪಾ ಡಿ ಎನ್ ಅವರು ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಚಿತ್ರಕ್ಕೆ ಉದಯ್ ಲೀಲಾ ಅವರ ಛಾಯಾ ಗ್ರಹಣ, ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಂಯೋಜನೆ, ಚಂದ್ರು ಅವರ ಸಂಕಲನವಿದೆ ಎಂದರು.

ಚೆಫ್ ಚಿದಂಬರ ಚಿತ್ರವು ವಿಶಿಷ್ಟ ವಿಭಿನ್ನ ಚಿತ್ರಕಥೆ ಒಳಗೊಂ ಡಿದೆ. ಒಮ್ಮೆ ನೋಡಿದರೇ ಎಲ್ಲಾರು ಇಷ್ಟಪಡುವಂತ ಸಿನಿಮಾ, ಇದರಲ್ಲಿ ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಚಲನಚಿತ್ರ ಅಭಿಮಾನಿ ತಮ್ಮ ಮನದಾಳದಲ್ಲಿ ಮನರಂಜನೆ ಇದು ಸೂಕ್ರ ಚಲನಚಿತ್ರವಾಗಿದೆ ಎಂದರು.

ಸಂದರ್ಭದಲ್ಲಿ ನಿರ್ಮಾಪಕ ರಾದ ರೂಪ, ನವೀನ್ ಉಪಸ್ಥಿತರಿ ದ್ದರು.

Share This Article