ನಾಲ್ಕನೇ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ ರಾಜಾಹುಲಿ ಪುತ್ರ ಬಿ.ವೈ. ರಾಘವೇಂದ್ರ

Editor Shivamogga Voice
2 Min Read

 

ಶಿವಮೊಗ್ಗ: ನಾಲ್ಕನೇ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ ಬಿ.ವೈ. ರಾಘವೇಂದ್ರ, ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘ ವೇಂದ್ರ ೭೭೮೭೨೧ ಮತ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ೫೩೫೦೦೬ ಮತ, ಬಂಡಾಯವಾಗಿ ಸ್ಪರ್ಧೆ ಮಾಡಿದ ಈಶ್ವರಪ್ಪ ೩೦೦೫೦ ಮತ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಎ.ಡಿ.ಶಿವಪ್ಪ ೨೭೭೯ ಮತ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಅರುಣ್ ಕಾನಹಳ್ಳಿ ೧೪೭೮, ಕರ್ನಾಟಕ ರಾಷ್ಟ್ರೀಯ ಸಮಿತಿ ಅಭ್ಯರ್ಥಿ ಎಸ್.ಕೆ.ಪ್ರಭು ೬೧೭ ಮತ, ಯಂಗ್ ಸ್ಟಾರ್ ಎಂಪರ್‌ಮೆಂಟ್ ಪಾರ್ಟಿ ಅಭ್ಯರ್ಥಿ ಮಹಮ್ಮದ್ ಯೂಸಫ್ ಖಾನ್ ೪೦೪ ಮತ, ಸ್ವತಂತ್ರ ಅಭ್ಯರ್ಥಿ ಇಮ್ತಿಯಾಜ್ ಆ ಅತ್ತರ್ ೪೪೨ ಮತ, ಸ್ವತಂತ್ರ ಅಭ್ಯರ್ಥಿ ಡಿ.ಎಸ್.ಈಶ್ವರಪ್ಪ ೬೯೫ ಮತ, ಸ್ವತಂತ್ರ ಅಭ್ಯರ್ಥಿ ಕನೂಜ್ ಮಂಜುನಾಥ್ ಗೌಡ ೬೮೩, ಸ್ವತಂತ್ರ ಅಭ್ಯರ್ಥಿ ಗಣೇಶ್ ಬಿ ೭೪೭ ಮತ ,ಸ್ವತಂತ್ರಅಭ್ಯರ್ಥಿ ಚಂದ್ರಶೇ ಖರ್ ಹೆಚ್.ಸಿ. ೩೫೭ ಮತ, ಸ್ವತಂತ್ರ ಅಭ್ಯರ್ಥಿ ಜಿ.ಜಯದೇವ್ ೩೬೮ ಮತ, ಸ್ವತಂತ್ರ ಅಭ್ಯರ್ಥಿ ಜಾನ್ ಬೆನ್ನಿ ೮೬೭, ಸ್ವತಂತ್ರ ಅಭ್ಯರ್ಥಿ ಎನ್.ವಿ.ನವೀನ್ ಕುಮಾರ್ ೧೯೯೩ ಮತ, ಸ್ವತಂತ್ರ ಅಭ್ಯರ್ಥಿ ಪೂಜ್ ಅಣ್ಣಯ್ಯ ೩೪೫೭ ಮತ, ಸ್ವತಂತ್ರ ಅಭ್ಯರ್ಥಿ ಬಂಡಿ ೭೨೬೬ ಮತ, ಸ್ವತಂತ್ರ ಅಭ್ಯರ್ಥಿ ರವಿಕುಮಾರ್ ಎನ್. 4552 ಮತ, ಸ್ವತಂತ್ರ ಅಭ್ಯರ್ಥಿ ಶಿವರುದ್ರಯ್ಯ ಸ್ವಾಮಿ 599 ಮತ, ಸ್ವತಂತ್ರ ಅಭ್ಯರ್ಥಿ ಶ್ರೀಪತಿ ಭಟ್ 344 ಮತ, ಸ್ವತಂತ್ರ ಅಭ್ಯರ್ಥಿ ಹೆಚ್.ಸುರೇಶ್ ಪೂಜಾರಿ 220 ಮತ, ಸ್ವತಂತ್ರ ಅಭ್ಯರ್ಥಿ ಸಂದೇಶ ಶೆಟ್ಟಿ 293 ಮತ, ಸ್ವತಂತ್ರ ಅಭ್ಯರ್ಥಿ ಈ ಹೆಚ್.ನಾಯ್ಕ್ 954 ಮತಗಳನ್ನು ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಎಸ್.ಬಂಗಾರಪ್ಪನವರ ಕುಟುಂಬ ರಾಜಕಾರಣದಲ್ಲಿ ಈ ಬಾರಿ ಚುನಾವಣೆ ಫಲಿತಾಂಶ ಬರುವ ತನಕವೂ ತೀವ್ರ ಪೈಪೋಟಿ ಇದೆ ಎಂಬುದು ಬಿಂಬಿತವಾಗಿತ್ತು ಆದರೂ ಕೂಡ ಫಲಿತಾಂಶದ ನಂತರ ಬಿ.ವೈ.ರಾಘವೇಂದ್ರ ಸುಮಾರು 2.5 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಕರ್ನಾಟಕದಲ್ಲಿ ಎನ್.ಡಿ.ಎ. ೧೬ ಸ್ಥಾನಗಳನ್ನು ಗೆದ್ದಿದೆ ನಿಜ. ಇದೇ ಸಂದರ್ಭದಲ್ಲಿ ಬಿಜೆಪಿ ಕಳೆದ ಬಾರಿಗಿಂತ 10 ಸ್ಥಾನಗಳನ್ನು ಕಳೆದುಕೊಂಡಿದೆ.

ಆದರೆ ತುಮಕೂರು, ಮೈಸೂ ರು, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾ ), ಚಿತ್ರದುರ್ಗ ಮತ್ತು ಬೆಂಗ ಳೂರು (ಉ ), ಕ್ಷೇತ್ರಗಳಲ್ಲಿ ಒಕ್ಕೂಟದ ಗೆಲುವಿಗೆ ಈ ಜೆಡಿಎಸ್ ಜೊತೆಗಿನ ಪ್ರಮುಖ ಕಾರಣವಾಯಿತು.

ಇಲ್ಲದಿದ್ದರೆ ಬಿಜೆಪಿ ಬಹುಷಃ ೧೦ ರಿಂದ ೧೧ ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಇನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬಿಜೆಪಿಯ ಸಾಂಪ್ರದಾಯಿಕ ಗೆಲುವಿನ ಕ್ಷೇತ್ರಗಳ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಷಯ.

ಕಳೆದ ಬಾರಿ ೨ ರಿಂದ ೩.೫೦ ಲಕ್ಷ ಮತಗಳಿಂದ ಗೆಲುವು ಸಾಧಿಸಿದ ಬೆಳಗಾವಿ, ಹಾವೇರಿ ಹುಬ್ಬಳ್ಳಿ- ಧಾರವಾಡ, ವಿಜಯ ಪುರದ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಲೀಡ್ ಕಡಿಮೆಯಾಗಿರುವುದನ್ನು ಗಮನಿಸಿದರೆ ಬಿಜೆಪಿಯ ರಾಜ್ಯ ನಾಯಕತ್ವ ಅಷ್ಟೊಂದು ಕೆಲಸ ಮಾಡಲಿಲ್ಲ ಎಂಬುದಕ್ಕೆ ಇಂದಿನ ಫಲಿತಾಂಶ ಸಾಕ್ಷಿ ಎಂಬ ಚರ್ಚೆ ಶುರುವಾಗಿದೆ.

ಇನ್ನು ಲಿಂಗಾಯತ ಪ್ರಾಬಲ್ಯದ ರಾಯಚೂರು, ಚಿಕ್ಕೋಡಿ, ಕಲ್ಬುರ್ಗಿ, ಕೊಪ್ಪಳ, ಬೀದರ್, ಬಳ್ಳಾರಿ, ದಾವಣಗೆರೆಯಲ್ಲಿನ ಸೋಲನ್ನು ನೋಡಿದಾಗ ಬಿ.ವೈ. ವಿಜಯೇಂದ್ರ ಅವರ ನಾಯಕತ್ವದ ಕೆಲಸ ನಿರ್ವಹಿಸಲಿಲ್ಲ. ಅದಲ್ಲದೇ ದೇಶದಲ್ಲಿ ಬಿಜೆಪಿ ಕಳೆದತ್ವದಲ್ಲಿ ಗೆದ್ದು ಬಂದಂತೆ ಬಾರದೆ ಇರುವುದು ಈಗ ದೇಶದ ನಾಯಕ ಅಪಕತ್ವತೆಯನ್ನೂ ತೋರುತ್ತಿದೆ.

Share This Article