ಭಾರತದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮೂರನೇ ಪ್ರಧಾನಿ ನರೇಂದ್ರ ಮೋದಿ

Editor Shivamogga Voice
3 Min Read

ಭಾರತದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮೂರನೇ ಪ್ರಧಾನಿ ನರೇಂದ್ರ ಮೋದಿ

೨೦೨೪ರ ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆಯ ಲಿದೆ ಎಂದು ಭವಿಷ್ಯ ನುಡಿದಿದ್ದರೂ, ವಿಪಕ್ಷಗಳ ಇಂಡಿಯಾ ಮೈತ್ರಿಕೂ ಟವು ಅಧಿಕಾರಕ್ಕೆ ಮರಳುವ ಭರವಸೆಯಲ್ಲಿದೆ. ಒಂದು ವೇಳೆ ಈ ಬಾರಿಯೂ ಎನ್‌ಡಿಎ ಗೆಲುವು ಸಾಧಿಸಿದ್ದೇ ಆದರೆ ಪ್ರಧಾನಿಯಾಗಿ ೧೦ ವರ್ಷಗಳಿಗೂ ಅಧಿಕ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಸ್ಥಾನ ಪಡೆಯಲಿದ್ದಾರೆ.

ಜವಾಹರಲಾಲ್ ನೆಹರು (ಕಾಂಗ್ರೆಸ್)

ಅಧಿಕಾರಾವಧಿ: ೧೯೪೭-೧೯೬೪

ಅವಧಿ: ೧೬ ವರ್ಷ, ೨೮೬ ದಿನ

ಜವಾಹರಲಾಲ್ ನೆಹರು ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು ೧೯೪೭ ರಿಂದ ೧೯೬೪ ರಲ್ಲಿ ಸಾಯುವ ರೆಗೂ ದೇಶವನ್ನು ಮುನ್ನಡೆಸಿದರು ಮತ್ತು ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಹರು ಅವರು ದೇಶದಲ್ಲಿ ದೊಡ್ಡ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆ ಗಳನ್ನು ಪ್ರಾರಂಭಿಸಿದರು ಮತ್ತು ವೈಜ್ಞಾನಿಕ ಶಿಕ್ಷಣವನ್ನು ಉತ್ತೇಜಿಸಿ ದರು. ಅವರು ಶೀತಲ ಸಮರದ ಸಮಯದಲ್ಲಿ ಯುಎಸ್ ಮತ್ತು ಸೋವಿಯತ್ ಒಕ್ಕೂಟ ದಿಂದ ಸ್ವತಂತ್ರವಾಗಿ ದೇಶವನ್ನು ಉಳಿಸಿ ಕೊಂಡು ಅಲಿಪ್ತ ಭಾರತದ ವಿದೇಶಾಂಗ ನೀತಿಯನ್ನು ಸ್ಥಾಪಿಸಲು ಸಹಾಯ ಮಾಡಿದರು.

ಇಂದಿರಾ ಗಾಂಧಿ (ಕಾಂಗ್ರೆಸ್)

ಅಧಿಕಾರಾವಧಿ: ೧೯೬೬-೧೯೭೭, ೧೯೮೦-೧೯೮೪

ಅವಧಿ: ೧೫ ವರ್ಷ, ೩೫೦ ದಿನ

ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ನಾಲ್ಕು ಅವಧಿಗಳಲ್ಲಿ ಸುಮಾರು ೧೬ ವರ್ಷಗಳ ಕಾಲ ಪ್ರಧಾನಿಯಾಗಿ ದೇಶ ಸೇವೆ ಸಲ್ಲಿಸಿದರು. ಬ್ಯಾಂಕ್‌ಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿ ಮತ್ತು ತುರ್ತು ಪರಿಸ್ಥಿತಿ (೧೯೭೫-೧೯೭೭) ಮುಂತಾದವುಗಳಿಂದ ಹೆಚ್ಚಾಗಿ ಇಂದಿರಾ ಗಾಂಧಿ ಗುರುತಿಸಿ ಕೊಳ್ಳುತ್ತಾರೆ. ಅವರು ೧೯೭೧ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತವನ್ನು ವಿಜಯದತ್ತ ಮುನ್ನಡೆಸಿದರು. ಇದು ಬಾಂಗ್ಲಾ ದೇಶದ ರಚನೆಗೆ ಕಾರಣವಾಯಿತು.

ನರೇಂದ್ರ ಮೋದಿ (ಬಿಜೆಪಿ)

ಅಧಿಕಾರಾವಧಿ: ೨೦೧೪-ಇಂದಿನವರೆಗೆ

ಅವಧಿ: ೧೦ ವರ್ಷ, ೧೯ ದಿನ

ಸದ್ಯದ ಪ್ರಧಾನಿ ನರೇಂದ್ರ ಮೋದಿ ಅವರು ೨೦೧೪ ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಇದೀಗ ಮೂರನೇ ಅವಧಿಗೆ ಪ್ರಧಾನಿಯಾ ಗಲು ಎದರು ನೋಡುತ್ತಿದ್ದು, ತಮ್ಮ ಸುಧಾರಣೆಗಳು ಮತ್ತು ಕ್ರಿಯಾತ್ಮಕ ವಿದೇಶಾಂಗ ನೀತಿಗಾಗಿ ಗುರುತಿ ಸಲ್ಪಟ್ಟಿದ್ದಾರೆ. ದೇಶ ಮತ್ತು ವಿದೇಶ ಗಳಲ್ಲಿ ಪ್ರಶಂಸೆ ಗಳಿಸಿದ್ದಾರೆ. ಅವರ ಎರಡನೇ ಅವಧಿ (೨೦೧೯) ಆರ್ಥಿ ಕ ಪುನರುಜ್ಜೀವನ, ಮೂಲ ಸೌಕರ್ಯ ಮತ್ತು ಜಾಗತಿಕ ಒಳಗೊ ಳ್ಳುವಿಕೆಯ ಮೇಲೆ ಕೇಂದ್ರೀಕರಿಸಿದೆ.

ಮನಮೋಹನ್ ಸಿಂಗ್ (ಕಾಂಗ್ರೆಸ್)

ಅಧಿಕಾರಾವಧಿ: ೨೦೦೪-೨೦೧೪

ಅವಧಿ: ೧೦ ವರ್ಷ, ೪ ದಿನ

ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ೧೦ ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲು ಸಹಾಯ ಮಾಡಿದ ನಿರಂತರ ಆರ್ಥಿಕ ಸುಧಾರಣೆ ಗಳಿಗೆ ಅವರು ಹೆಸರಾಗಿದ್ದಾರೆ. ಸಿಂಗ್ ಅವರ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯಂತಹ ಪ್ರಮುಖ ಕಾನೂನುಗಳನ್ನು ಪರಿಚಯಿಸಿತು. ಭಾರತದಲ್ಲಿ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಸುಧಾರಿಸಲು ಕೆಲಸ ಮಾಡಿದೆ.

ಅಟಲ್ ಬಿಹಾರಿ ವಾಜಪೇಯಿ (ಬಿಜೆಪಿ) :ಅಧಿಕಾರಾವಧಿ: ೧೯೯೬, ೧೯೯೮-೨೦೦೪

ಅವಧಿ: ೬ ವರ್ಷ, ೮೦ ದಿನ

ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿದ್ದರು. ೧೯೯೮ ರಲ್ಲಿ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ ಹೆಸರಾಗಿದ್ದಾರೆ. ಇದು ಭಾರತವನ್ನು ಮಾನ್ಯತೆ ಪಡೆದ ಪರಮಾಣು ಶಕ್ತಿಯನ್ನಾಗಿ ಮಾಡಿದೆ. ವಾಜಪೇಯಿ ಅವರು ಪಾಕಿಸ್ತಾನ ದೊಂದಿಗಿನ ಸಂಬಂಧವನ್ನು ಸುಧಾರಿಸಲು ಕೆಲಸ ಮಾಡಿದರು ಮತ್ತು ಸುವರ್ಣ ಚತುಷ್ಪಥ ಹೆದ್ದಾರಿ ಜಾಲದಂತಹ ಪ್ರಮುಖ ಮೂಲಸೌಕರ್ಯ ಯೋಜನೆ ಗಳನ್ನು ಪ್ರಾರಂಭಿಸಿದರು.

Share This Article